ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ತೈಲ ಮಳೆ: ಅಗ್ನಿಶಾಮಕ ದಳಕ್ಕೆ ನಾಗರಿಕರಿಂದ ದೂರು 

Last Updated 16 ನವೆಂಬರ್ 2020, 4:25 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ ರಾತ್ರಿ ವಿಚಿತ್ರ ವಿದ್ಯಮಾನವೊಂದು ನಡೆದಿದೆ. ಸಂಜೆಯಿಂದಲೂ ಸುರಿಯುತ್ತಿದ್ದ ಮಳೆಯ ನಡುವೆಯೇ 'ತೈಲ ಮಳೆ'ಯೂ ಆಗಿದೆ ಎಂದು ಹಲವರು ಅಗ್ನಿಶಾಮಕ ದಳ ಮತ್ತು ಇತರೇ ತುರ್ತು ಸೇವೆಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

'ಮಳೆ ನೀರಿನಲ್ಲಿ ತೈಲ', 'ತೈಲ ವರ್ಣದಮಳೆ'ಯಾಗುತ್ತಿದೆ ಎಂದು ದೂರಿದ 55 ಕರೆಗಳು ವಿವಿಧ ಪ್ರದೇಶಗಳ ನಾಗರಿಕರಿಂದ ದೆಹಲಿಯ ಅಗ್ನಿಶಾಮಕ ದಳಕ್ಕೆ ಭಾನುವಾರ ರಾತ್ರಿ ಬಂದಿದೆ,' ಎಂದು ದೆಹಲಿಯ ಅಗ್ನಿಶಾಮ ಸೇವೆಗಳ ಮುಖ್ಯಸ್ಥ ಅತುಲ್‌ ಗರ್ಗ್‌ ಮಾಹಿತಿ ನೀಡಿದ್ದಾರೆ. ಕರೆ ಮಾಡಿದವರಲ್ಲಿ ಬಹುತೇಕರು ವಾಹನ ಸವಾರರರಾಗಿದ್ದು, ಮಳೆ ನೀರಿನಿಂದಾಗಿ ರಸ್ತೆ ಜಿಡ್ಡು ಜಿಡ್ಡಾಗಿದ್ದು, ವಾಹನಗಳು ಜಾರುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

'ನಾಗರಿಕರ ದೂರುಗಳಿಗೆ ಕೂಡಲೇ ಸ್ಪಂದಿಸಲಾಯಿತು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಯನ್ನು ರವಾನಿಸಲಾಯಿತು. ಆದರೆ, ಅಲ್ಲಿ ಅವರಿಗೆ ಮಳೆನೀರಿನಲ್ಲಿ ಎಣ್ಣೆಯಂಥ ಪದಾರ್ಥವಾಗಲಿ, ರಾಸಾಯನಿಕವಾಗಲಿ ಪತ್ತೆಯಾಗಿಲ್ಲ,' ಎಂದು ಗರ್ಗ್‌ ತಿಳಿಸಿದ್ದಾರೆ.

'ಮಳೆ, ಧೂಳು ಮತ್ತು ಮಾಲಿನ್ಯದಿಂದಾಗಿ ನೀರು ಹಾಗೆ ಕಂಡಿದೆ. ಆದರೂ, ಅಗ್ನಿಶಾಮಕ ಇಲಾಖೆಯು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದೆ,' ಎಂದು ಅವರು ಹೇಳಿದರು.

ಕೇಂದ್ರೀಕೃತ ಆಂಬ್ಯುಲೆನ್ಸ್ ಟ್ರಾಮಾ (ಸಿಎಟಿಎಸ್) ತುರ್ತು ಸೇವೆಗಳಿಗೂ ಸಹ ಇಂಥ ಹಲವಾರು ಕರೆಗಳು ಬಂದಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT