ಚೆನ್ನೈ: ‘ಒಂದು ಕಾಲದಲ್ಲಿ ಪ್ರತ್ಯೇಕ ಹಾದಿಯಲ್ಲಿದ್ದ ಡಿಎಂಕೆ ಮತ್ತು ಕಾಂಗ್ರೆಸ್ ಈಗ ರಾಷ್ಟ್ರಹಿತಕ್ಕಾಗಿ ಒಂದು ತಂಡವಾಗಿವೆ’ ಎಂದು ತಮಿಳುನಾಡಿನ ಮುಖ್ಯಮಂತ್ರಿಯೂ ಆಗಿರುವ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಸೋಮವಾರ ಹೇಳಿದ್ದಾರೆ.

ವಿರುಧನಗರ ಜಿಲ್ಲೆಯಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಮುಖಂಡನ ಮಗನ ಮದುವೆಯಲ್ಲಿ ಪಾಲ್ಗೊಂಡ ಅವರು, ‘ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನನ್ನನ್ನು ಹಿರಿಯಣ್ಣನಂತೆ ಕಾಣುತ್ತಾರೆ. ಅವರೊಂದಿಗಿನ ಮಾತುಕತೆ ಸುಮಧುರ’ ಎಂದು ಮೆಲುಕು ಹಾಕಿದ್ದಾರೆ.

‘ಬೇರೆ ಹಾದಿಯಲ್ಲಿದ್ದ ಎರಡು ಪ್ರತ್ಯೇಕ ಪಕ್ಷಗಳು ದೇಶದ ಹಿತಕ್ಕಾಗಿ ಒಂದಾಗಿವೆ. ಆ ಮೂಲಕ ತಮಿಳುನಾಡಿನ ಬೆಳವಣಿಗೆ ಮತ್ತು ರಾಷ್ಟ್ರದ ಏಕತೆಗಾಗಿ ಒಂದು ತಂಡವಾಗಿವೆ. ಸಮಾನ ಚಿಂತನೆಯೊಂದಿಗೆ ಹೆಜ್ಜೆ ಹಾಕುತ್ತಿವೆ’ ಎಂದಿದ್ದಾರೆ.

‘ನಾನು ಯಾವುದೇ ರಾಜಕೀಯ ಮುಖಂಡರನ್ನು ‘ಸೋದರ’ ಎಂದು ಸಂಭೋಧಿಸುವುದಿಲ್ಲ. ಆದರೆ ರಾಹುಲ್ ಗಾಂಧಿ ಅವರನ್ನು ಹಾಗೆ ಕರೆಯದಿರಲು ಸಾಧ್ಯವಿಲ್ಲ. ಇದಕ್ಕೆ ಕಾರಣ, ಅವರು ನನ್ನನ್ನು ನಡೆಸಿಕೊಳ್ಳುವ ರೀತಿ. ಫೋನ್ ಕರೆ ಅಥವಾ ವೈಯಕ್ತಿಕವಾಗಿ ಅವರು ನನ್ನೊಂದಿಗೆ ಮಾತನಾಡಿದಾಗಲೂ, ‘ಪ್ರೀತಿಯ ಸೋದರ’ ಎಂದೇ ಅವರು ಕರೆಯುತ್ತಾರೆ. ಅದನ್ನು ನಾನು ಎಂದಿಗೂ ಮರೆಯಲಾಗದು’ ಎಂದು ಸ್ಟಾಲಿನ್ ಹೇಳಿದ್ದಾರೆ.

‘ಇದು ಕೇವಲ ರಾಜಕೀಯ ಸ್ನೇಹವಲ್ಲ. ಸೈದ್ಧಾಂತಿಕ ಸಂಬಂಧ. ಅದು ಈಗ ಇಡೀ ದೇಶದಲ್ಲೇ ಪ್ರತಿಧ್ವನಿಸುತ್ತಿದೆ. ಅಂಥ ಭಾವನೆಯನ್ನು ಎಲ್ಲರಿಂದಲೂ ನಾವು ನಿರೀಕ್ಷಿಸುತ್ತೇವೆ. ರಾಷ್ಟ್ರದ ಹಿತವನ್ನೇ ಮುಖ್ಯವಾಗಿಟ್ಟುಕೊಂಡು ಎರಡೂ ಪಕ್ಷಗಳ ಈ ಸಂಬಂಧ ಹೀಗೇ ಮುಂದುವರಿಯಬೇಕು’ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ನೂತನ ದಂಪತಿಗೆ ಶುಭಕೋರಿದ ಸ್ಟಾಲಿನ್, ಅವರಿಗೆ ಜನಿಸುವ ಮಕ್ಕಳಿಗೆ ಸುಂದರವಾದ ತಮಿಳಿನ ಹೆಸರಿಡುವಂತೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.