ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದ್ರ ಕುದುರೆಗಳ ಸಾಕುವಿಕೆಯೂ ಅಪರಾಧ, ಎಚ್ಚರ..!

Last Updated 8 ಫೆಬ್ರುವರಿ 2021, 7:49 IST
ಅಕ್ಷರ ಗಾತ್ರ

ಮುಂಬೈ: ಸಮುದ್ರ ಕುದುರೆ (ನೀರು ಕುದುರೆ) ಭಾರತೀಯ ವನ್ಯಜೀವಿ ಕಾನೂನಿ ವ್ಯಾಪ್ತಿಗೆ ಒಳಪಡಿಸಿ ಸಂರಕ್ಷಣೆಗೆ ಕ್ರಮಕೈಗೊಳ್ಳಲಾಗಿದೆ. ಹೀಗಾಗಿ, ಸಾರ್ವಜನಿಕರು ಈ ಕಡಲ ಜೀವಿಯನ್ನು ತಮ್ಮ ಮನೆಯ ಅಕ್ವೇರಿಯಂನಲ್ಲಿಟ್ಟು ಸಾಕುವುದು ಅಪರಾಧವಾಗುತ್ತದೆ.

‘ಟ್ರಾಫಿಕ್ ಮತ್ತು ಡಬ್ಲ್ಯಡಬ್ಲ್ಯುಎಫ್‌ ಇಂಡಿಯಾ’ ಸಂಸ್ಥೆಗಳ ಪ್ರಕಾರ, ಪರಿಸರದಲ್ಲಿ ಪ್ರಮುಖ ಪಾತ್ರವಹಿಸುವ ಈ ಸಮುದ್ರ ಜೀವಿಯನ್ನು ವನ್ಯಜೀವಿ ಕಾನೂನಿನ ಅಡಿ ರಕ್ಷಿಸಲಾಗುತ್ತಿದ್ದು, ಇವುಗಳನ್ನು ತಮ್ಮ ಮನೆಯ ಮೀನಿನ ತೊಟ್ಟಿಯಲ್ಲಿ ತಂದಿಟ್ಟುಕೊಳ್ಳುವ ಮುನ್ನ ಒಮ್ಮೆ ಗಂಭೀರವಾಗಿ ಯೋಚಿಸಬೇಕಿದೆ.

ಅಕ್ರಮ ಸಂಗ್ರಹದಲ್ಲಿದ್ದ ಸಮುದ್ರ ಕುದುರೆಗಳನ್ನು ಜಪ್ತಿ ಮಾಡಿರುವ ವರದಿಗಳ ಪ್ರಕಾರ, ಅಕ್ವೇರಿಯಂ ವ್ಯಾಪಾರಕ್ಕೆ ಭಾರಿ ಪ್ರಮಾಣದಲ್ಲಿ ಈ ಕಡಲ ಜೀವಿ ಬಲಿಯಾಗುತ್ತಿದೆ. ವಿಶ್ವದಾದ್ಯಂತ ಜೀವಂತ ಸಮುದ್ರ ಕುದುರೆಗಳನ್ನು ಅಕ್ವೇರಿಯಂ ವ್ಯಾಪಾರಕ್ಕೆ ಬಳಸಲಾಗುತ್ತಿದೆ. ಆದರೆ, ಸತ್ತ ಸಮುದ್ರ ಕುದುರೆಗಳನ್ನು ಪಾರಂಪರಿಕ ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಆಭರಣಗಳು, ಕೀ ಚೈನ್‌ಗಳು, ನೆನಪಿನ ಕಾಣಿಕೆಗಳನ್ನು ತಯಾರಿಕೆಗೆ ಬಳಸಲಾಗುತ್ತಿದೆ.

ತಮ್ಮ ವಿಶಿಷ್ಟ ಹಾಗೂ ಆಕರ್ಷಕ ದೇಹ ರಚನೆಯಿಂದಾಗಿ ಈ ನೀರು ಕುದುರೆಗಳು ಸತ್ತ ನಂತರವೂ ಕುತೂಹಲಕ್ಕಾಗಿ ಇವುಗಳು ಮಾರಾಟದ ಸರಕುಗಳಾಗುತ್ತವೆ.

ಮುಂಬೈ ವಿಮಾನ ನಿಲ್ದಾಣದಲ್ಲಿ 2019ರಲ್ಲಿ ಅರಣ್ಯ ಇಲಾಖೆಯವರು ವಶಪಡಿಸಿಕೊಂಡ ಕಂಟೇನರ್‌ಗಳಲ್ಲಿ 3 ಸಾವಿರಕ್ಕೂ ಹೆಚ್ಚೂ ಸಮುದ್ರ ಕುದುರೆಗಳನ್ನು ಪತ್ತೆ ಮಾಡಿದ್ದರು. ಭಾರತ ಚೀನಾ ಗಡಿ ಭಾಗದಲ್ಲಿರುವ ನಾಥು–ಲಾದಲ್ಲಿ ಕಳ್ಳಸಾಗಣೆ ವ್ಯಾಪಾರ ಮಾರ್ಗವನ್ನು ಪತ್ತೆ ಹಚ್ಚಿದ ವೇಳೆ, ಅಧಿಕಾರಿಗಳು 56 ಕೆಜಿ ಒಣಗಿದ ಸಮುದ್ರ ಕುದುರೆಯನ್ನು ವಶಪಡಿಸಿಕೊಂಡಿದ್ದರು.

ಈ ಘಟನೆಗಳ ನಂತರ, ಭಾರತದಲ್ಲಿರುವ ‘ಟ್ರಾಫಿಕ್ಸ್‘ ಸಂಸ್ಥೆ, ಡಬ್ಲ್ಯುಡಬ್ಲ್ಯುಎಫ್‌–ಇಂಡಿಯಾ ಸಂಸ್ಥೆಯ ನೆರವಿನೊಂದಿಗೆ ದೇಶದಲ್ಲಿರುವ ಸಮುದ್ರ ಕುದುರೆಗಳ ಕಳ್ಳಸಾಗಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಆನ್‌ಲೈನ್ ಅಭಿಯಾನ ಆರಂಭಿಸಿದೆ.

ಸಮುದ್ರ ಕುದುರೆಗಳನ್ನು ಸಂಗ್ರಹಿಸುವುದು ಒಂದು ಕಳ್ಳತನವಿದ್ದಂತೆ (ಪೊಸೆಸ್ಸಿಂಗ್ ಈಸ್ ಸ್ಟೀಲಿಂಗ್)‘ ಎಂಬ ಪ್ರಮುಖ ಸಂದೇಶವನ್ನು ಜನರಿಗೆ ತಲುಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಅಂತಹ ಜೀವಿಗಳನ್ನು ಖರೀದಿಸಬೇಡಿ. ಇದರಿಂದ ವನ್ಯ ಜೀವಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂಬ ಮಾಹಿತಿಯನ್ನು ಜನರಿಗೆ ತಲುಪಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT