ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ₹7 ಕೋಟಿಗೂ ಹೆಚ್ಚು ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ಸಂಬಂಧ ಮಣಿಪುರದ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರದ ಇಬ್ಬರು ಪೆಡ್ಲರ್ಗಳನ್ನು ಬಂಧಿಸುವ ಮೂಲಕ ಅಂತರರಾಜ್ಯ ಮಾದಕ ವಸ್ತುಗಳ ದಂಧೆಯನ್ನು ಮಟ್ಟಹಾಕಲಾಗಿದೆ. ಬಂಧಿತರಿಂದ ಬರೋಬ್ಬರಿ ₹ 7 ಕೋಟಿಗೂ ಹೆಚ್ಚು ಮೌಲ್ಯದ ಮಾದಕ ಔಷಧಿಯನ್ನು ಅಸ್ಸಾಂನ ಕಾಮರೂಪ ಜಿಲ್ಲೆಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮಣಿಪುರದ ಚುರಾಚಂದ್ಪುರದಿಂದ ಕಾಮರೂಪ ಮೂಲಕ ಕೆಳ ಅಸ್ಸಾಂ ಜಿಲ್ಲೆಗೆ ಕಾರಿನಲ್ಲಿ ಮಾದಕ ವಸ್ತುಗಳನ್ನು ಸಾಗಿಸಲಾಗುತ್ತಿದೆ ಎಂಬ ಸುಳಿವು ಸಿಕ್ಕಿತ್ತು. ಖಚಿತ ಮಾಹಿತಿಯ ಆಧಾರದ ಮೇಲೆ, ಮುಂಜಾನೆ ಅಮಿಂಗಾವ್ನಲ್ಲಿ ವಾಹನವನ್ನು ತಡೆಹಿಡಿದು 910 ಗ್ರಾಂ ತೂಕದ 74 ಸೋಪ್ ಬಾಕ್ಸ್ಗಳ ಮಾದಕ ವಸ್ತುಗಳನ್ನು ಎಸ್ಟಿಎಫ್ ವಶಪಡಿಸಿಕೊಂಡಿದೆ. ಇವುಗಳನ್ನು ವಾಹನದ ಬಾಗಿಲಿನ ಮುಂಭಾಗ ಮತ್ತು ಡಿಕ್ಕಿಯಲ್ಲಿ ಅಡಗಿಸಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ಪ್ರಕರಣ ಸಂಬಂಧ ಚುರಾಚಂದ್ಪುರ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಮಾದಕ ವಸ್ತುಗಳ ನಿಯಂತ್ರಣ ಬ್ಯೂರೋ (ಎನ್ಸಿಬಿ) ಮಾನದಂಡಗಳ ಪ್ರಕಾರ, ವಶಪಡಿಸಿಕೊಳ್ಳಲಾದ ವಸ್ತುಗಳ ಮೌಲ್ಯ ₹7.28 ಕೋಟಿ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
.ಬೆಂಗಳೂರು | ₹2.30 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: ನೈಜೀರಿಯಾ ಪ್ರಜೆ ಬಂಧನ.ಬೆಂಗಳೂರು | 2 ಎರಡು ಪ್ರತ್ಯೇಕ ಪ್ರಕರಣ: ₹1.70 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.