ನವದೆಹಲಿ/ಐಜ್ವಾಲ್: ಮಾದಕವಸ್ತು ಕಳ್ಳಸಾಗಣೆ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾರತ– ಮ್ಯಾನ್ಮಾರ್ ಗಡಿಯಲ್ಲಿನ ಮಿಜೋರಾಂ ಸೇರಿದಂತೆ ಅಸ್ಸಾಂ ಮತ್ತು ಗುಜರಾತ್ನ ಕೆಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಗುರುವಾರ ಶೋಧ ನಡೆಸಿದೆ.

ಕೆಲವು ಡಿಜಿಟಲ್ ಉಪಕರಣಗಳು ಸೇರಿದಂತೆ ₹35 ಲಕ್ಷ ನಗದನ್ನು ತನಿಖಾ ಸಂಸ್ಥೆ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿಜೋರಾಂನ ಐಜ್ವಾಲ್, ಚಂಫೈ, ಅಸ್ಸಾಂನ ಶ್ರೀಭೂಮಿ (ಕರೀಮ್ಗಂಜ್) ಹಾಗೂ ಗುಜರಾತ್ನ ಅಹಮದಾಬಾದ್ನಲ್ಲಿ ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್ಎ) ಕಾಯ್ದೆಯಡಿ ಶೋಧ ನಡೆಸಲಾಗಿದೆ ಎಂದಿದ್ದಾರೆ.

ಆರು ಜನರಿಂದ ₹1.41 ಕೋಟಿ ಬೆಲೆಯ 4.72 ಕೆ.ಜಿ. ಹೆರಾಯಿನ್ ವಶಪಡಿಸಿಕೊಂಡ ಮಿಜೋರಾಂ ಪೊಲೀಸರು ದಾಖಲಿಸಿದ ಎಫ್ಐಆರ್ನಿಂದ ಈ ತನಿಖೆ ಆರಂಭವಾಗಿದೆ. ಭಾರತ– ಮ್ಯಾನ್ಮಾರ್ ಗಡಿಯಲ್ಲಿ ಇ.ಡಿ ನಡೆಸಿದ ಮೊದಲ ಶೋಧ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.