ಆಗ್ರಾ: ಪಾದಚಾರಿಗಳ ಮೇಲೆ ಕಾರು ಹರಿದು ಐವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಆಗ್ರಾದ ಸೆಂಟ್ರಲ್ ಹಿಂದಿ ಇನ್ಸ್ಟಿಟ್ಯೂಟ್ ಬಳಿ ಇಂದು ಬೆಳಗಿನ ಜಾವ ನಡೆದಿದೆ.

ಮೃತರನ್ನು ಬಬ್ಲಿ (33) ಬಾನು ಪ್ರತಾಪ್ (25) ಕಮಲ್ (23) ಕೃಷ್ಣ (20) ಬಂತೇಶ್ (21) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇನ್ನೂ ಕೆಲವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಕಾರು ಚಾಲಕನನ್ನು ಬಂಧಿಸಲಾಗಿದ್ದು, ಆತ ಚಾಲನೆ ವೇಳೆ ಆಲ್ಕೋಹಾಲ್ ಸೇವಿಸಿದ್ದು ಪ್ರಾಥಮಿಕವಾಗಿ ತಿಳಿದು ಬಂದಿದೆ. ರಕ್ತ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಲಾಗಿದೆ ಎಂದು ಆಗ್ರಾ ಡಿಸಿಪಿ ಶೇಷ ಮಣಿ ಉಪಾಧ್ಯ ತಿಳಿಸಿದ್ದಾರೆ.

ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದ ಚಾಲಕ ಮೊದಲು ಡಿವೈಡರ್ಗೆ ಡಿಕ್ಕಿ ಹೊಡೆದಿದ್ದ. ಬಳಿಕ ರಸ್ತೆ ಬದಿ ಪಾದಚಾರಿ ಮಾರ್ಗಕ್ಕೆ ಕಾರನ್ನು ನುಗ್ಗಿಸಿ ಅಮಾಯಕರ ಪ್ರಾಣ ಹೋಗಲು ಕಾರಣವಾಗಿದ್ದಾನೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.