ಚೆನ್ನೈ: ತಮಿಳುನಾಡಿನಲ್ಲಿ ಸತತ ಎರಡನೇ ವರ್ಷವೂ ಕಾಡಾನೆಗಳ ಸಂಖ್ಯೆ ಹೆಚ್ಚಳವಾಗಿದೆ.

ಕಳೆದ ವರ್ಷ ರಾಜ್ಯದಲ್ಲಿ 3,063 ಆನೆಗಳಿದ್ದವು, ಪ್ರಸಕ್ತ ವರ್ಷದಲ್ಲಿ ಆನೆಗಳ ಸಂಖ್ಯೆ 3,170ಕ್ಕೆ ಏರಿಕೆಯಾಗಿದೆ. ನೆರೆಯ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ನಡೆಸಿದ ಆನೆ ಸಮೀಕ್ಷೆಯಲ್ಲಿ ಈ ಅಂಕಿಅಂಶಗಳು ಹೊರಬಿದ್ದಿವೆ.

ಕರ್ನಾಟಕದ ಸಹಕಾರದೊಂದಿಗೆ ಮೇ 23ರಿಂದ 25ರವರೆಗೆ ಸಮೀಕ್ಷೆ ನಡೆಸಲಾಗಿತ್ತು. ರಾಜ್ಯದ ಒಟ್ಟು ಆನೆಗಳ ಪೈಕಿ ವಯಸ್ಕ ಆನೆಗಳ ಸಂಖ್ಯೆ ಶೇ 44ರಷ್ಟಿದೆ.

ತಮಿಳುನಾಡಿನಲ್ಲಿ ಇರುವ ಗಂಡು ಮತ್ತು ಹೆಣ್ಣು ಆನೆಗಳ ಲಿಂಗಾನುಪಾತವು ಅಂದಾಜು 1:1.77ರಷ್ಟಿದೆ. ನೆರೆಯ ಕೇರಳ ಮತ್ತು ಕರ್ನಾಟಕದಲ್ಲಿಯೂ ಆನೆಗಳ ಲಿಂಗಾನುಪಾತ ಬಹುತೇಕ ಇದೇ ರೀತಿ ಇದೆ ಎಂದು ಸಮೀಕ್ಷೆ ವರದಿಯು ತಿಳಿಸಿದೆ.

ಹುಲಿ ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಸಂರಕ್ಷಣಾಲಯಗಳು, ರಾಷ್ಟ್ರೀಯ ಉದ್ಯಾನ ಸೇರಿದಂತೆ 26 ಅರಣ್ಯ ವಿಭಾಗಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಅರಣ್ಯ ಇಲಾಖೆಯ 2,043 ಸಿಬ್ಬಂದಿ ಮತ್ತು ಸ್ವಯಂಪ್ರೇರಿತರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.