ಮುಂಬೈ: ಕೋವಿಡ್–19 ಪೀಡಿತರ ಪೈಕಿ ಕಾಯಿಲೆ ಉಲ್ಬಣಿಸುವ ಅಪಾಯ ಎದುರಿಸುತ್ತಿರುವವರಿಗಾಗಿ ಮೂಗಿನಲ್ಲಿ ಸಿಂಪಡಣೆ ಮಾಡಬಹುದಾದ (ನೇಜಲ್ ಸ್ಪ್ರೆ) ‘ಫ್ಯಾಬಿಸ್ಪ್ರೆ’ ಎಂಬ ಔಷಧವನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಗ್ಲೆನ್ಮಾರ್ಕ್ ಫಾರ್ಮಾಸ್ಯೂಟಿಕಲ್ಸ್ ಹಾಗೂ ಕೆನಡಾ ಮೂಲದ ಸ್ಯಾನೊಟೈಜ್ ರಿಸರ್ಜ್ ಅಂಡ್ ಡೆವಲೆಪ್ಮೆಂಟ್ ಕಾರ್ಪ್ ಕಂಪನಿಗಳು ಈ ಕುರಿತು ಘೋಷಿಸಿವೆ. ‘ನೈಟ್ರಿಕ್ ಆಕ್ಸೈಡ್’ ಒಳಗೊಂಡಿರುವ ಈ ಔಷಧ ವೈರಸ್ ನಾಶಕವಾಗಿ ಕೆಲಸ ಮಾಡುವುದು ಸಾಬೀತಾಗಿದೆ ಎಂದೂ ತಿಳಿಸಿವೆ.

ಭಾರತದಲ್ಲಿ ಈ ಔಷಧವನ್ನು ತಯಾರಿಸಲು ಹಾಗೂ ಮಾರಾಟಕ್ಕೆ ಗ್ಲೆನ್ಮಾರ್ಕ್ ಕಂಪನಿಗೆ ಡಿಸಿಜಿಐ ಇತ್ತೀಚೆಗೆ ಅನುಮೋದನೆ ನೀಡಿತ್ತು.

ಈ ಔಷಧವು ಸೂಕ್ಷ್ಮಾಣುಜೀವಿ ನಿರೋಧಕ ಗುಣಗಳನ್ನು ಹೊಂದಿದ್ದು, ಕೋವಿಡ್ಗೆ ಕಾರಣವಾಗುವ ‘ಸಾರ್ಸ್–ಕೋವ್–2’ ವೈರಸ್ ನಾಶ ಮಾಡುವ ಸಾಮರ್ಥ್ಯ ಹೊಂದಿದೆ. ಈ ಔಷಧವನ್ನು ಮೂಗಿನ ಹೊಳ್ಳೆಗಳಲ್ಲಿ ಸಿಂಪಡಿಸಿದಾಗ ಅದು, ವೈರಸ್ನ ದಾಳಿಗೆ ರಾಸಾಯನಿಕವಾಗಿ ಹಾಗೂ ಭೌತಿಕವಾಗಿ ತಡೆಗೋಡೆಯಂತೆ ಕೆಲಸ ಮಾಡುತ್ತದೆ. ಇದರಿಂದ, ಕೊರೊನಾ ವೈರಸ್ ವೃದ್ಧಿಯಾಗದಂತೆ ಹಾಗೂ ಶ್ವಾಸಕೋಶ ಪ್ರವೇಶಿಸಿ ಸೋಂಕು ಹರಡದಂತೆ ತಡೆಗಟ್ಟುತ್ತದೆ ಎಂದು ಕಂಪನಿಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.