ತಿರುವನಂತಪುರ: ಕೇರಳ ಕೇಡರ್ನ ಮೊದಲ ಮಹಿಳಾ ಐಪಿಎಸ್ ಅಧಿಕಾರಿ, ನಿವೃತ್ತ ಡಿಜಿಪಿ ಆರ್.ಶ್ರೀಲೇಖಾ ಬುಧವಾರ ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್, ಜಿಲ್ಲಾ ಘಟಕದ ಅಧ್ಯಕ್ಷ ವಿ.ವಿ. ರಾಜೇಶ್ ಸಮಕ್ಷಮದಲ್ಲಿ ಸದಸ್ಯತ್ವ ಪಡೆದರು.

‘ಪ್ರಧಾನಿ ಮೋದಿಯವರ ವರ್ಚಸ್ಸು ಬಿಜೆಪಿ ಸೇರುವಂತೆ ನನ್ನ ಮೇಲೆ ಪ್ರಭಾವ ಬೀರಿದೆ. ಪಕ್ಷದಿಂದ ಏನನ್ನು ಬಯಸಲ್ಲ. ಜನಸೇವೆಗೆ ಸಿಕ್ಕ ಮತ್ತೊಂದು ಅವಕಾಶವಿದು. ಜನರಿಗಾಗಿ ಕೆಲಸ ಮಾಡುವೆ’ ಎಂದು ಶ್ರೀಲೇಖಾ ಹೇಳಿದರು.

‘ಪೊಲೀಸ್ ಅಧಿಕಾರಿಯಾಗಿ ಕಳಂಕರಹಿತ ದಾಖಲೆ ಹೊಂದಿರುವ ನಿವೃತ್ತ ಡಿಜಿಪಿಯ ಅನುಭವವು ಪಕ್ಷಕ್ಕೆ ಹೆಚ್ಚು ಲಾಭವಾಗಲಿದೆ. 2026ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ನಾವು ಶ್ರಮಿಸುತ್ತೇವೆ’ ಎಂದು ಸುರೇಂದ್ರನ್ ಹೇಳಿದರು.

1987ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಶ್ರೀಲೇಖಾ, 2020ರಲ್ಲಿ ನಿವೃತ್ತರಾಗುವ ಮುನ್ನ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಹಲವು ಪುಸ್ತಕಗಳನ್ನು ಬರೆದಿದ್ದಾರೆ.

ಇದಕ್ಕೂ ಮುನ್ನ ನಿವೃತ್ತ ಡಿಜಿಪಿಗಳಾದ ಜಾಕೋಬ್ ಥಾಮಸ್ ಬಿಜೆಪಿಗೆ ಸೇರ್ಪಡೆಯಾಗಿದ್ದರೆ, ಟಿ.ಪಿ. ಸೆನ್ಕುಮಾರ್ ಅವರು ಆರ್ಎಸ್ಎಸ್ ಮತ್ತು ಸಂಘ ಪರಿವಾರದ ಸಂಘಟನೆಗಳೊಂದಿಗೆ ಒಡನಾಟ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.