ಭೋಪಾಲ್: ಮಧ್ಯಪ್ರದೇಶದ ಹೈಕೋರ್ಟ್ ನ್ಯಾಯಾಮೂರ್ತಿ ರೋಹಿತ್ ಆರ್ಯ ಅವರು ನಿವೃತ್ತಿಯಾದ ಮೂರು ತಿಂಗಳ ನಂತರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಪಕ್ಷವನ್ನು ಸೇರಲು ಪ್ರಧಾನಿ ಮೋದಿ ಅವರ ಸಾರ್ವಜನಿಕ ಆಧಾರಿತ ಅಭಿವೃದ್ಧಿ ಕಾರ್ಯಗಳು ಮತ್ತು ಬಿಜೆಪಿ ಪಕ್ಷದ ನೀತಿಗಳು ಪ್ರಾಥಮಿಕವಾಗಿ ಪ್ರಭಾವ ಬೀರಿರುವುದಾಗಿ ಅವರು ಹೇಳಿದ್ದಾರೆ.

ಭೋಪಾಲ್ನಲ್ಲಿರುವ ಪಕ್ಷದ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಗಾರದಲ್ಲಿ ಮಾತಾನಾಡಿದ ನಂತರ, ಆರ್ಯ ಬಿಜೆಪಿ ಸೇರ್ಪಡೆಯಾದರು ಎಂದು ಪಕ್ಷದ ನಾಯಕರೊಬ್ಬರು ಸೋಮವಾರ ತಿಳಿಸಿದರು.

‘ಭಾರತೀಯ ದಂಡ ಸಂಹಿತೆಯನ್ನು, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಎಂದು ಬದಲಿಸುತ್ತಿರುವುದು ದೊಡ್ಡ ವಿಷಯ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಬಿಎನ್ಎಸ್ ಜನರ ಜೀವನದಲ್ಲಿ ಉತ್ತಮ ಬದಲಾವಣೆ ತರಲಿದೆ’ ಎಂದು ಆರ್ಯ ಹೇಳಿದ್ದಾರೆ.

ಇಂದೋರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ಭಾವನೆ ಘಾಸಿಗೊಳಿಸಿದ ಮತ್ತು ಕೋವಿಡ್–19ರ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದಡಿ ಸ್ಟ್ಯಾಂಡ್ – ಅಪ್ ಕಾಮಿಡಿಯನ್ ಮುನಾವರ್ ಫಾರುಕಿ ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿ 2021ರಲ್ಲಿ ಹೆಚ್ಚು ಗಮನ ಸೆಳೆದಿದ್ದ ಆರ್ಯ, 27 ಏಪ್ರಿಲ್ 2024ರಂದು ನಿವೃತ್ತಿ ಹೊಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.