ದಿಬ್ರುಗಡ: ಅಸ್ಸಾಂನ ದಿಬ್ರುಗಡದಲ್ಲಿ ಮತ್ತು ಚಿರೈದೊ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಗ್ರೆನೇಡ್ ಸ್ಫೋಟ ಸಂಭವಿಸಿದೆ.
ದೇಶದಾದ್ಯಂತ ಗಣರಾಜ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ದಿಬ್ರುಗಡದ ಗ್ರಹಾಂ ಬಜಾರ್, ಎಟಿ ರಸ್ತೆಯಲ್ಲಿರುವ ಗುರುದ್ವಾರ ಬಳಿ ಗ್ರೆನೇಡ್ ಸ್ಫೋಟಗೊಂಡಿದೆ.
Assam DGP Bhaskar Jyoti Mahant: We have received the information about the explosion in Dibrugarh. An investigation has begun, it is being probed that who is involved in this. https://t.co/jIIToDOLlZ
ದುಲಿಯಜನ್ ಎಂಬಲ್ಲಿ ಇನ್ನೊಂದು ಸ್ಫೋಟ ಸಂಭವಿಸಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಚಿರೈದೊ ಜಿಲ್ಲೆಯ ಟೋಕ್ ಘಾಟ್ನಲ್ಲಿ ಸ್ಫೋಟ ಸಂಭವಿಸಿದ್ದು, ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ.
ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗ್ರೆನೇಡ್ ಎಸೆದು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.