ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

News Express: ಶ್ರೀಕಾಂತ್ ಒಬ್ಬನೇನಾ ಹಿಂದೂ?: ಜಿ. ಪರಮೇಶ್ವರ್‌ ಪ್ರಶ್ನೆ

Published 5 ಜನವರಿ 2024, 13:55 IST
Last Updated 5 ಜನವರಿ 2024, 13:55 IST
ಅಕ್ಷರ ಗಾತ್ರ

‘ಶ್ರೀಕಾಂತ್ ಪೂಜಾರಿ 16 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆ ಬಗ್ಗೆ ದಾಖಲೆ ಇದೆ. ಆ ಪೈಕಿ ಕೆಲ ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾನೆ. ಅಂತಹ ವ್ಯಕ್ತಿಗಾಗಿ ನೀವು ಹೋರಾಟ ಮಾಡುತ್ತಿದ್ದೀರಿ. ಅವನೊಬ್ಬನೇ ಹಿಂದೂನಾ? ಬೇರೆ ಹಿಂದೂಗಳೂ‌ ಇದ್ದಾರೆ. ಅವರು ನಿಮ್ಮ‌‌ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಶುಕ್ರವಾರ ಮಾಗಡಿಯಲ್ಲಿ ಹೇಳಿದ ಗೃಹ ಸಚಿವ ಜಿ. ಪರಮೇಶ್ವರ್, ‘ಪೂಜಾರಿ ಪರವಾಗಿ ನಡೆಯುತ್ತಿರುವ ಹೋರಾಟದ ಹಿಂದೆ ರಾಜಕೀಯ ದುರುದ್ದೇಶವಿದೆ’ ಎಂದರು. ಇತ್ತ, 1992ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಶ್ರೀಕಾಂತ ಪೂಜಾರಿಗೆ ಹುಬ್ಬಳ್ಳಿಯಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಸೇಷನ್ ಕೋರ್ಟ್‌ ಶುಕ್ರವಾರ ಜಾಮೀನು ನೀಡಿದೆ. ಇದರೊಂದಿಗೆ, ದಿನದ ಪ್ರಮುಖ ವಿದ್ಯಮಾನಳು ಈ ವಿಡಿಯೊದಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT