ಶನಿವಾರ, 6 ಡಿಸೆಂಬರ್ 2025
×
ADVERTISEMENT
ADVERTISEMENT

5ನೇ ದಿನವೂ ಮುಂದುವರಿದ ಇಂಡಿಗೊ ಬಿಕ್ಕಟ್ಟು: ಟಿಕೆಟ್‌ ಮೊತ್ತ ಮರುಪಾವತಿಗೆ ಆದೇಶ

Published : 6 ಡಿಸೆಂಬರ್ 2025, 15:33 IST
Last Updated : 6 ಡಿಸೆಂಬರ್ 2025, 15:33 IST
ಫಾಲೋ ಮಾಡಿ
Comments
ಸಿಇಒ ಕ್ಷಮೆಯಾಚನೆ...
ಐದು ದಿನಗಳಿಂದ ಇಂಡಿಗೊ ವಿಮಾನಯಾನದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ವಿಡಿಯೊ ಸಂದೇಶ ರವಾನಿಸಿರುವ ಇಂಡಿಗೊ ವಿಮಾನಯಾನ ಸಂಸ್ಥೆಯ ಸಿಇಒ ಪೀಟರ್‌ ಎಲ್ಬರ್ಸ್‌, ‘ಅಡಚಣೆಗಳಿಂದ ಪ್ರಯಾಣಿಕರಿಗೆ ಆದ ಅನಾನುಕೂಲಕ್ಕೆ ಕ್ಷಮೆಯಾಚಿಸುತ್ತೇವೆ’ ಎಂದಿದ್ದಾರೆ. ಶುಕ್ರವಾರ 1000ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದಾಗಿತ್ತು. ಶನಿವಾರ ಆ ಸಂಖ್ಯೆ ಕಡಿಮೆ ಆಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. 
ಪೈಲಟ್‌ಗಳ ಸಂಘದ ಆಕ್ಷೇಪ
ಇಂಡಿಗೊ ವಿಮಾನಯಾನ ಸಂಸ್ಥೆಗೆ ತಾತ್ಕಾಲಿಕವಾಗಿ ವಿಶ್ರಾಂತಿ ನೀತಿಯ ತಡೆಗೆ ಅವಕಾಶ ಕಲ್ಪಿಸಿರುವ ಡಿಜಿಸಿಎ ವಿರುದ್ಧ ಏರ್‌ಲೈನ್ಸ್‌ ಪೈಲಟ್‌ಗಳ ಸಂಘ (ಎಎಲ್‌ಪಿಎ) ಆಕ್ಷೇಪ ವ್ಯಕ್ತಪಡಿಸಿದೆ. ಹೀಗೆ ನಿಯಮಗಳ ಸಡಿಲಿಕೆಯು ಸಮಾನತೆಯನ್ನು ನಾಶಪಡಿಸುತ್ತದೆ ಅಲ್ಲದೆ, ಲಕ್ಷಾಂತರ ಪ್ರಯಾಣಿಕರನ್ನು ಹೆಚ್ಚಿನ ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಹೇಳಿದೆ. ‘ಆಯಾಸ ತಗ್ಗಿಸುವ ಮಾನದಂಡಗಳ ಜಾರಿಗೊಳಿಸುವಿಕೆಯನ್ನು ಕಡ್ಡಾಯಗೊಳಿಸುವ ಕುರಿತು ನ್ಯಾಯಾಲಯ ನೀಡಿದ್ದ ನಿರ್ದೇಶನಗಳಿಗೆ ವಿರುದ್ಧವಾದ ಕ್ರಮವನ್ನು ಡಿಜಿಸಿಎ ತೆಗೆದುಕೊಂಡಿದೆ’ ಎಂದು ಸಂಘ ಆರೋಪಿಸಿದೆ.
ನಾಲ್ಕು ವಿಶೇಷ ರೈಲು (ಹೈದರಾಬಾದ್‌): 
ದಕ್ಷಿಣ ಮಧ್ಯ ರೈಲ್ವೆಯು ಶನಿವಾರ ನಾಲ್ಕು ವಿಶೇಷ ರೈಲುಗಳನ್ನು ಓಡಿಸುವುದಾಗಿ ಘೋಷಿಸಿದೆ. ಹೈದರಾಬಾದ್‌ನಿಂದ ಚೆನ್ನೈ, ಮುಂಬೈ, ಶಾಲಿಮಾರ್‌ಗೆ (ಕೋಲ್ಕತ್ತ) ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತಗ್ಗಿಸಲು ಶನಿವಾರ ವಿಶೇಷ ರೈಲುಗಳನ್ನು ಓಡಿಸುತ್ತಿರುವುದಾಗಿ ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT