ನವದೆಹಲಿ: ಭಾರತದಲ್ಲಿ ಈ ತಿಂಗಳು ನಿಗದಿಯಾಗಿದ್ದ ಎಚ್1–ಬಿ ವೀಸಾ ಅರ್ಜಿದಾರರ ಸಂದರ್ಶನವನ್ನು ದಿಢೀರ್ ಮುಂದೂಡಲಾಗಿದೆ.

ಅರ್ಜಿದಾರರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಮತ್ತು ಆನ್ಲೈನ್ ಪ್ರೊಫೈಲ್ಗಳನ್ನು ಪರಿಶೀಲಿಸುವ ಉದ್ದೇಶದಿಂದ ಸಂದರ್ಶನವನ್ನು ಹಲವು ತಿಂಗಳು ಮುಂದೂಡಲಾಗಿದೆ.

ಕೆಲವು ಅರ್ಜಿದಾರರ ಸಂದರ್ಶನವು ಮುಂದಿನ ವಾರ ನಿಗದಿಯಾಗಿತ್ತು. ಆದರೆ ಸಂದರ್ಶನವನ್ನು ಮುಂದಿನ ವರ್ಷ ಮೇ ತಿಂಗಳಿಗೆ ಮುಂದೂಡಲಾಗಿದೆ ಎಂದು ಅಮೆರಿಕದ ವಲಸೆ ಅಧಿಕಾರಿಗಳು ಇ–ಮೇಲ್ಗಳು ಮೂಲಕ ತಿಳಿಸಿದ್ದಾರೆ.

ಡಿಸೆಂಬರ್ 15ರ ನಂತರ ನಿಗದಿಯಾಗಿದ್ದ ಸಂದರ್ಶನವನ್ನು ಸಾಮೂಹಿಕವಾಗಿ ಸ್ಥಗಿತಗೊಳಿಸಿದ್ದರಿಂದ ಈಗಾಗಲೇ ಭಾರತಕ್ಕೆ ಬಂದಿರುವ ಹಲವು ಅರ್ಜಿದಾರರು ಅಮೆರಿಕಕ್ಕೆ ಮರಳಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ.

ಈ ಮಧ್ಯೆ ಅಮೆರಿಕ ರಾಯಭಾರ ಕಚೇರಿಯು, ‘ಈ ಹಿಂದೆ ನಿಗದಿಯಾಗಿದ್ದ ದಿನಾಂಕದಂದು ಸಂದರ್ಶನಕ್ಕಾಗಿ ಕಾನ್ಸುಲರ್ ಕಚೇರಿಗೆ ಹಾಜರಾಗದಿರಿ’ ಎಂದು ತಿಳಿಸಿದೆ.

ಈ ಬೆನ್ನಲ್ಲೇ ಹಲವು ವೀಸಾ ಅರ್ಜಿದಾರರು ಅನಾಮದೇಯರಾಗಿ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.