ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಮಹಾ ಪಂಚಾಯಿತಿ ಶೋಭಾ ಯಾತ್ರೆ: ನೂಹ್ –ಗುರುಗ್ರಾಮ ಗಡಿಯಲ್ಲಿ ಬಿಗಿ ಭದ್ರತೆ

Published 28 ಆಗಸ್ಟ್ 2023, 2:12 IST
Last Updated 28 ಆಗಸ್ಟ್ 2023, 2:12 IST
ಅಕ್ಷರ ಗಾತ್ರ

ಗುರುಗ್ರಾಮ: ಸರ್ವ ಜಾತಿಯ ಹಿಂದೂ ಮಹಾ ಪಂಚಾಯಿತಿ ಇಂದು (ಸೋಮವಾರ) ಶೋಭಾ ಯಾತ್ರೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನೂಹ್‌ನಲ್ಲಿ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ನೂಹ್‌ -ಗುರುಗ್ರಾಮ ಗಡಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳಿಗೆ ಪ್ರವೇಶ ಒದಗಿಸುವ ಮುನ್ನ ತಪಾಸಣೆ ನಡೆಸುತ್ತಿದ್ದೇವೆ. ಗುರುತಿನ ಚೀಟಿ ಹೊಂದಿರುವ ಜನರಿಗೆ ಮಾತ್ರ ನೂಹ್ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ ಎಂದು ಹರಿಯಾಣದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಧರಂಬೀರ್ ಸಿಂಗ್ ತಿಳಿಸಿದ್ದಾರೆ.

ನೂಹ್‌ ಜಿಲ್ಲೆಯಲ್ಲಿ ಜುಲೈನಲ್ಲಿ ಕೋಮು ಹಿಂಸಾಚಾರದಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದರಿಂದ, ಶೋಭಾ ಯಾತ್ರೆಗೆ ಜಿಲ್ಲಾಡಳಿತ ಅನುಮತಿ ನೀಡಲು ನಿರಾಕರಿಸಿದೆ. ನೂಹ್ ಜಿಲ್ಲೆಯಷ್ಟೇ ಅಲ್ಲದೇ, ಅಂತರ ಜಿಲ್ಲಾ ಗಡಿಗಳು ಮತ್ತು ಅಂತರರಾಜ್ಯ ಗಡಿಗಳಲ್ಲೂ ಭದ್ರತೆ ಬಿಗಿಗೊಳಿಸಲಾಗಿದೆ.

ಜಿಲ್ಲೆಯ ಎಲ್ಲ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದೆ. ಮಲ್ಹಾರ್ ದೇವಸ್ಥಾನಕ್ಕೆ ಹೋಗುವ ಮಾರ್ಗವನ್ನು ಸಹ ಮುಚ್ಚಲಾಗಿದೆ. ಆದರೆ, ಕೆಎಂಪಿ ಎಕ್ಸ್‌ಪ್ರೆಸ್‌ವೇ ಮತ್ತು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚಾರ ಮುಂದುವರಿಯಲಿದೆ ಎಂದು ನೂಹ್‌ ಜಿಲ್ಲೆಯ ಪೊಲೀಸ್‌ ವಕ್ತಾರರು ಹೇಳಿದ್ದಾರೆ.

ಯಾತ್ರೆಗೆ ಅನುಮತಿ ನಿರಾಕರಣೆ

ಇಂದು ವಿಎಚ್‌ಪಿ ಹಮ್ಮಿಕೊಂಡಿರುವ ಶೋಭಾ ಯಾತ್ರೆಗೆ ಜಿಲ್ಲಾಡಳಿತವು ಅನುಮತಿ ನಿರಾಕರಿಸಿದೆ. ಆದರೂ ಯಾತ್ರೆ ನಡೆಸಲು ಆಯೋಜಕರು ಮುಂದಾಗಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಿಮಿಸಿದೆ.

ಯಾತ್ರೆಯ ಆಯೋಜಕರು ಮೆರವಣಿಗೆ ನಡೆಸಲು ಕೋರಿ ಸಲ್ಲಿಸಿದ್ದ ಮನವಿಯನ್ನು ಜುಲೈ 23ರಂದು ನೂಹ್ ಜಿಲ್ಲಾಡಳಿತವು ತಿರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT