ಚಂಡೀಗಢ: ಹರಿಯಾಣದಲ್ಲಿ ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಐಪಿಎಸ್ ಅಧಿಕಾರಿ ವೈ.ಪೂರನ್ ಕುಮಾರ್ ಅವರ ಮರಣೋತ್ತರ ಪರೀಕ್ಷೆ ಕುರಿತು ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಮೃತರ ಕುಟುಂಬವು ಮರಣೋತ್ತರ ಪರೀಕ್ಷೆ ನಡೆಸಲು ಒಪ್ಪಿಗೆ ನೀಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಚಂಡೀಗಢ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ನ್ಯಾಯಾಲಯಕ್ಕೆ ಮಂಗಳವಾರ ಅರ್ಜಿ ಸಲ್ಲಿಸಿದ್ದರು. ಇದೀಗ ಕುಟುಂಬದವರು ಮರಣೋತ್ತರ ಪರೀಕ್ಷೆ ನಡೆಸಲು ಒಪ್ಪಿಗೆ ನೀಡಿದ್ದು, ಅದು ಶೀಘ್ರದಲ್ಲೇ ನಡೆಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
.ಹರಿಯಾಣ: ಮೃತ ಐಪಿಎಸ್ ಅಧಿಕಾರಿ ಪವನ್ ಕುಮಾರ್ ಮನೆಗೆ ರಾಹುಲ್ ಗಾಂಧಿ ಭೇಟಿ.ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತಡೆಗೆ ಕಾಗದರಹಿತ ನೋಂದಣಿ ಆರಂಭಿಸಿದ ಹರಿಯಾಣ ಸಿಎಂ.
ಜಾತಿ ಆಧಾರಿತ ತಾರತಮ್ಯವೆಸಗಿ ಕಿರುಕುಳ ನೀಡಲಾಗುತ್ತಿದೆ ಎಂದು ನೊಂದು ಪೂರನ್ ಅವರು ಅ.7ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಸಾವಿಗೆ ಇಲಾಖೆಯ ಕೆಲವು ಅಧಿಕಾರಿಗಳು ಕಾರಣ ಎಂದು ಮರಣಪತ್ರದಲ್ಲಿ ಉಲ್ಲೇಖಿಸಿದ್ದರು. ಐಎಎಸ್ ಅಧಿಕಾರಿ ಹಾಗೂ ಪೂರನ್ ಪತ್ನಿಯಾಗಿರುವ ಅಮ್ನಿತ್ ಪಿ. ಕುಮಾರ್ ಅವರು ಮರಣಪತ್ರದಲ್ಲಿ ಉಲ್ಲೇಖಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಮರಣೋತ್ತರ ಪರೀಕ್ಷೆ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

‘ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್ ಹಾಗೂ ರೋಹಟಕ್ ಎಸ್ಪಿ ನರೇಂದ್ರ ಬಿಜಾರಾಣಿಯಾ ಅವರು ಕಿರುಕುಳ ನೀಡುವ ಜೊತೆಗೆ ನನ್ನನ್ನು ಸದಾ ಅವಮಾನಿಸುತ್ತಿದ್ದರು’ ಎಂದು ಮರಣಪತ್ರದಲ್ಲಿ ಪೂರನ್ ಆರೋಪಿಸಿದ್ದರು.

ಹರಿಯಾಣ ಸರ್ಕಾರವು ಸೋಮವಾರ ತಡರಾತ್ರಿ ಡಿಜಿಪಿ ಶತ್ರುಜೀತ್ ಕಪೂರ್ ಅವರನ್ನು ರಜೆಯ ಮೇಲೆ ಕಳುಹಿಸಿದರೆ, ಅದಕ್ಕೂ ಮೊದಲು ಬಿಜಾರಾಣಿಯಾ ಅವರನ್ನು ವರ್ಗಾವಣೆ ಮಾಡಿದೆ.

ಪೂರನ್ ಅವರ ಮೃತದೇಹವನ್ನು ಸರ್ಕಾರಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ಸ್ನಾತಕೋತ್ತರ ಸಂಸ್ಥೆ (PGIMER)ಯಲ್ಲಿ ಇಡಲಾಗಿದ್ದು ಶೀಘ್ರವೇ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಚಂಡೀಗಢದಲ್ಲಿ ಪೂರನ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
.IPS ಅಧಿಕಾರಿ ಆತ್ಮಹತ್ಯೆ: BJP ಆಡಳಿತದಲ್ಲಿ ದಲಿತರು ಸುರಕ್ಷಿತವಾಗಿಲ್ಲ–ಪ್ರಿಯಾಂಕಾ.IPS ಅಧಿಕಾರಿ ಅಂಜನಾ ವಿರುದ್ಧದ ಟ್ವೀಟ್ ಅಳಿಸಿ ಹಾಕಿ, ಕ್ಷಮೆಯಾಚಿಸಿದ MLC ಮಿಟ್ಕರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.