ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿ: ಭಕ್ತರ ದಟ್ಟಣೆ, 48 ಗಂಟೆ ಕಳೆದರೂ ಸಿಗದ ದರ್ಶನ, ಟೋಕನ್‌ ವಿತರಣೆ ಸ್ಥಗಿತ

Published 1 ಅಕ್ಟೋಬರ್ 2023, 10:10 IST
Last Updated 1 ಅಕ್ಟೋಬರ್ 2023, 10:10 IST
ಅಕ್ಷರ ಗಾತ್ರ

ಹೈದರಾಬಾದ್: ಸುಪ್ರಸಿದ್ಧ ಧಾರ್ಮಿಕ ಸ್ಥಳ ತಿರುಪತಿಯ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದ್ದು, ಭಕ್ತರ ದಟ್ಟಣೆಯಿಂದಾಗಿ ದರ್ಶನಕ್ಕಾಗಿ 48 ಗಂಟೆಗೂ ಅಧಿಕ ಸಮಯ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ದರ್ಶನಕ್ಕಾಗಿ ಇರುವ ಎಲ್ಲ ಸರದಿ ಸಾಲುಗಳು ಭರ್ತಿಯಾಗಿದ್ದು, ಇವುಗಳ ಹೊರತು 5 ಕಿ.ಮೀನಷ್ಟು ಭಕ್ತರ ಸಾಲು ಇದೆ. ಬೆಟ್ಟದ ಪ್ರವೇಶ ಮಾರ್ಗ ಅಲಿಪಿರಿ ಟೋಲ್‌ಗೇಟ್ ಬಳಿಯೂ ವಾಹನಗಳ ದಟ್ಟಣೆ ಉಂಟಾಗಿದೆ.

ಭಕ್ತರ ದಟ್ಟಣೆಯ ಹಿನ್ನೆಲೆಯಲ್ಲಿ ಕುಡಿಯುವ ನೀರು, ಹಾಲು, ಅನ್ನ ಪ್ರಸಾದಕ್ಕೆ ವಿತರಣೆಗೆ ನೆರವಾಗಲು 2,500 ಸ್ವಯಂಸೇವಕರನ್ನು ಟಿಟಿಡಿ ನಿಯೋಜಿಸಿದೆ.

ಅ.2 ರವರೆಗೆ ಸಾಲು ಸಾಲು ರಜೆ ಇರುವ ಕಾರಣ ಭಕ್ತರ ದಟ್ಟಣೆಗೆ ಹೆಚ್ಚಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಯ್ದ ದಿನಗಳಲ್ಲಿ ನೂಕುನುಗ್ಗಲು ಕಡಿಮೆ ಮಾಡಲು ಅಕ್ಟೋಬರ್ 1, 7, 8, 14 ಮತ್ತು 15ರಂದು ಎಸ್‌ಎಸ್‌ಡಿ ಟೋಕನ್‌ ವಿತರಣೆಯನ್ನು ರದ್ದುಪಡಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT