ನವದೆಹಲಿ(ಪಿಟಿಐ): ಕೇಂದ್ರ ಸರ್ಕಾರ ನೀಡುತ್ತಿರುವಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಬೆಳಗ್ಗೆ ತಿಂಡಿ ನೀಡುವ ಪ್ರಸ್ತಾವವಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ(ಎಚ್ಆರ್ಡಿ)ಸಚಿವರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.

ಬಿಸಿಯೂಟ ಯೋಜನೆಯಡಿ ಉಪಾಹಾರ ಸೇರಿಸುವ ಯೋಜನೆ ಇದೆಯೇ ಎಂದುರಾಜ್ಯ ಸಭೆಯಲ್ಲಿ ಕೇಳಲಾಗಿದ್ದ ಲಿಖಿತ ಪ್ರಶ್ನೆಯೊಂದಕ್ಕೆ, ನಿಶಾಂಕ್ ಉತ್ತರಿಸಿದರು.

‘ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ 2013 ರಂತೆ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿಒಂದರಿಂದ ಎಂಟನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಂದು ಹೊತ್ತಿನ ಬಿಸಿಯೂಟವನ್ನು ಉಚಿತವಾಗಿ ನೀಡಲಾಗುತ್ತಿದೆ. ಕೆಲ ರಾಜ್ಯಗಳು ತಮ್ಮ ಸ್ವಂತ ಸಂಪನ್ಮೂಲದಿಂದಹಾಲು, ಮೊಟ್ಟೆ, ಹಣ್ಣು ನೀಡುತ್ತಿವೆ. 2018–19ನೇ ಸಾಲಿನಲ್ಲಿ 11.34 ಲಕ್ಷ ಶಾಲೆಗಳಲ್ಲಿ ಸರಾಸರಿ ನಿತ್ಯ 9.17 ಕೋಟಿ ಮಕ್ಕಳಿಗೆ ಬಿಸಿಯೂಟ ನೀಡಲಾಗಿದೆ’ ಎಂದು ನಿಶಾಂಕ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.