‘ರಾಷ್ಟ್ರೀಯ ವಿಜಯ’
ಆಪರೇಷನ್ ಸಿಂಧೂರವನ್ನು ‘ರಾಷ್ಟ್ರೀಯ ವಿಜಯ’ ಎಂದು ಶ್ಲಾಘಿಸಿದ ಎ.ಪಿ.ಸಿಂಗ್ ಅವರು, ಈ ಕಾರ್ಯಾಚರಣೆಯು ಭಾರತದ ಸಶಸ್ತ್ರ ಪಡೆಗಳಿಗೆ ‘ನಾವು ಎಲ್ಲಿಗೆ ಹೋಗುತ್ತಿದ್ದೇವೆ ಮತ್ತು ಭವಿಷ್ಯದಲ್ಲಿ ನಮಗೆ ಏನೆಲ್ಲಾ ಬೇಕು’ ಎಂಬುದರ ‘ಸ್ಪಷ್ಟ ಕಲ್ಪನೆ’ಯನ್ನು ನೀಡಿದೆ ಎಂದರು.
‘ಈ ಗೆಲುವಿಗೆ ಪ್ರತಿಯೊಬ್ಬ ಭಾರತೀಯರು ಕೊಡುಗೆ ನೀಡಿದ್ದಾರೆ ಎಂಬುದು ನನಗೆ ಖಚಿತವಾಗಿದೆ. ಈ ಹಿಂದೆ ಹಲವು ಸಲ ಹೇಳಿದಂತೆ, ಇದು ಎಲ್ಲರೂ ಬಹಳ ವೃತ್ತಿಪರ ರೀತಿಯಲ್ಲಿ ನಿರ್ವಹಿಸಿದ ಕಾರ್ಯಾಚರಣೆಯಾಗಿದೆ. ಎಲ್ಲಾ ಏಜೆನ್ಸಿಗಳು, ಸಶಸ್ತ್ರ ಪಡೆಗಳು ಮತ್ತು ನಾವೆಲ್ಲರೂ ಕೈಜೋಡಿಸಿದ್ದೇವೆ. ಸತ್ಯವು ನಿಮ್ಮೊಂದಿಗಿದ್ದರೆ, ಎಲ್ಲವೂ ತನ್ನಿಂದ ತಾನೇ ನಡೆಯುತ್ತದೆ’ ಎಂದು
ಹೇಳಿದರು.