ಐಸ್ಲ್ಯಾಂಡ್ ಅನೇಕ ವಿಷಯಗಳಿಗೆ ಹೆಸರುವಾಸಿ. ಅದರಲ್ಲೂ ವಿಶೇಷವಾಗಿ ಸೊಳ್ಳೆಗಳೇ ಇಲ್ಲ ಎಂದು ಖ್ಯಾತಿ ಪಡೆದಿದ್ದ ದೇಶದಲ್ಲಿ ನಾಗರಿಕರೊಬ್ಬರ ಮನೆಯಲ್ಲಿ ಸೊಳ್ಳೆಗಳು ಕಂಡು ಬಂದಿವೆ ಎಂದು ವಿಜ್ಞಾನಿಯೊಬ್ಬರು ದೃಢಪಡಿಸಿದ್ದಾರೆ.

ಐಸ್ಲ್ಯಾಂಡ್ ಸುತ್ತಮುತ್ತ ಇರುವ ನಾರ್ವೆ, ಡೆನ್ಮಾರ್ಕ್, ಸ್ಕಾಟ್ಲೆಂಡ್ನಲ್ಲೂ ಸೊಳ್ಳೆ ಹಾವಳಿ ಇಲ್ಲ. ಅಲ್ಲಿನ ಸಮುದ್ರದ ಹವಾಮಾನ ವೈಪರೀತ್ಯ (oceanic climate) ಸೊಳ್ಳೆಗಳಿಗೆ ನೆಲೆ ಇಲ್ಲದಂತೆ ಮಾಡಿದೆ ಎಂದು ಹಿಂದಿನ ವರದಿ ಹೇಳಿತ್ತು.

ವಿದೇಶದ ಸರಕು ಸಾಗಾಣಿಕೆ ಹಡಗುಗಳಿಂದ ಸೊಳ್ಳೆಗಳು ಬಂದಿರಬಹುದೆಂದು ಐಸ್ಲ್ಯಾಂಡ್ನ ರಾಷ್ಟ್ರೀಯ ವಿಜ್ಞಾನ ಸಂಸ್ಥೆಯ ಕೀಟಶಾಸ್ತ್ರಜ್ಞ ಮಥಿಯಾಸ್ ಆಲ್ಫ್ರೆಡ್ಸನ್ ಮಾಹಿತಿ ನೀಡಿದ್ದಾರೆ.

'ಕುಲಿಸೆಟಾ ಆನ್ಯುಲಾಟಾ' ಎಂದು ಗುರುತಿಸಲಾದ ಸೊಳ್ಳೆಯು ಈ ದೇಶದ ಶೀತ ಹವಾಮಾನಕ್ಕೆ ಹೊಂದಿಕೊಂಡಿದೆ. ಐಸ್ಲ್ಯಾಂಡ್ ಈ ಪ್ರಭೇಧ ಕೀಟಗಳಿಗೆ ಸೂಕ್ತ ಸ್ಥಳವಾಗಿದೆ ಎಂದು ಆಲ್ಫ್ರೆಡ್ಸನ್ ಮಾಹಿತಿ ನೀಡಿದ್ದಾರೆ.

ಐಸ್ಲ್ಯಾಂಡ್ನಲ್ಲಿ ಸೊಳ್ಳೆ ಉತ್ಪತ್ತಿಯಾಗಲು ಕಾರಣಗಳು

ಐಸ್ಲ್ಯಾಂಡ್ನ ಮಣ್ಣು ಮತ್ತು ನೀರಿನ ರಾಸಾಯನಿಕ ಸಂಯೋಜನೆಯಿಂದ ಸೊಳ್ಳೆಗಳು ಸೊಳ್ಳೆಗಳು ಬಾರದಿರಬಹುದು ಎಂದು ಜೀವಶಾಸ್ತ್ರಜ್ಞ ಜಿಸ್ಲಿ ಮಾರ್ ಜಿನ್ಹಾಸನ್ ಹೇಳಿದ್ದರು. ಆದರೆ ಜಾಗತಿಕ ತಾಪಮಾನ ಏರಿಕೆಯ ಪರಿಣಾಮವಾಗಿಯೇ ಅಲ್ಲಿ ಕಳೆದ 20 ವರ್ಷದಲ್ಲಿ ಉಷ್ಣಾಂಶವು 16 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. 200 ಕ್ಕೂ ಹೆಚ್ಚು ಹೊಸ ಕ್ರಿಮಿಕೀಟಗಳು ಈಗ ವಾಸವಾಗಿವೆ. ತಾಪಮಾನ ಹೆಚ್ಚಾಗುತ್ತಲೇ ಇದ್ದರೆ ಮುಂದೊಂದು ದಿನ ಐಸ್ಲ್ಯಾಂಡ್ನಲ್ಲಿ ಕೂಡ ಸೊಳ್ಳೆಗಳು ನೆಲೆಸಬಹುದು ಈ ಹಿಂದೆಯೇ ಮಾಹಿತಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.