ನವದೆಹಲಿ: ಪಾಕಿಸ್ತಾನದ ವಿಮಾನಗಳಿಗೆ ಭಾರತದ ವಾಯುಪ್ರದೇಶದ ನಿರ್ಬಂಧವನ್ನು ಸೆಪ್ಟೆಂಬರ್ 24ರವರೆಗೆ ವಿಸ್ತರಿಸಲಾಗಿದೆ.

ಉಭಯ ರಾಷ್ಟ್ರಗಳು ವಾಯುಪ್ರದೇಶದ ಮೇಲಿನ ನಿರ್ಬಂಧವನ್ನು ವಿಸ್ತರಿಸುವ ಕುರಿತಂತೆ ವಾಯು ಕಾರ್ಯಾಚರಣೆಗೆ ಸಂಬಂಧಿತ ಪ್ರತ್ಯೇಕ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಪಾಕ್ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಯಾವುದೇ ವಿಮಾನಗಳು, ಪಾಕ್ ಒಡೆತನದ ಅಥವಾ ಗುತ್ತಿಗೆ ಪಡೆದ ಮಿಲಿಟರಿ ಮತ್ತು ನಾಗರಿಕ ವಿಮಾನಗಳು ಭಾರತದ ವಾಯುಪ್ರದೇಶ ಬಳಸಲು ಅನುಮತಿಸಲಾಗುವುದಿಲ್ಲ ಎಂದು ವರದಿಯಾಗಿದೆ.
.ಅವಹೇಳನಕಾರಿ ಹೇಳಿಕೆ ಆರೋಪ: ಮಹೇಶ್ ತಿಮರೋಡಿ 2 ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ.2016ರಲ್ಲಿ ವೀರೇಂದ್ರ ಪಪ್ಪಿ ಮನೆಯ ಸ್ನಾನದ ಕೋಣೆ ಗೋಡೆಯಲ್ಲಿ ಪತ್ತೆಯಾಗಿತ್ತು ಹಣ!.
ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರ ಹತ್ಯೆಯ ನಂತರ ಪಾಕಿಸ್ತಾನ ಜತೆಗಿನ ರಾಜತಾಂತ್ರಿಕ ಸಂಬಂಧ ಕಳಚಿಕೊಂಡು ಭಾರತವು ಅಲ್ಲಿನ ವಿಮಾನಗಳಿಗೆ ನಿರ್ಬಂಧ ಹೇರಿರುವುದನ್ನೂ ಒಳಗೊಂಡು ಹಲವು ಕ್ರಮಗಳನ್ನು ಕೈಗೊಂಡಿತ್ತು.

ಭಾರತೀಯ ಕಾಲಮಾನದ ಪ್ರಕಾರ ಮೇ 24ರವರೆಗೆ ವಿಧಿಸಿದ್ದ ನಿರ್ಬಂಧವನ್ನು ಆಗಸ್ಟ್ 24ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಒಂದು ತಿಂಗಳ ಅವಧಿಗೆ (ಸೆಪ್ಟೆಂಬರ್ 24) ನಿರ್ಬಂಧವನ್ನು ವಿಸ್ತರಿಸಲಾಗಿದೆ.

ಏತನ್ಮಧ್ಯೆ, ಪಾಕಿಸ್ತಾನವು ಭಾರತದ ವಿಮಾನಗಳಿಗೆ ತನ್ನ ವಾಯುಪ್ರದೇಶ ನಿರ್ಬಂಧವನ್ನು ಸೆಪ್ಟೆಂಬರ್ 24ರವರೆಗೆ ವಿಸ್ತರಿಸಿದೆ.
.TikTok | ಟಿಕ್ಟಾಕ್ ಮೇಲಿನ ನಿಷೇಧ ತೆರವುಗೊಳಿಸಿಲ್ಲ: ಕೇಂದ್ರ ಸರ್ಕಾರ.ಧರ್ಮಸ್ಥಳ | ಸಾಕ್ಷಿ ದೂರುದಾರನ ಬಂಧನ: ಮುಂದಿನ ಕ್ರಮ SIT ನಿರ್ಧರಿಸಲಿದೆ-ಪರಮೇಶ್ವರ.RCOMನಿಂದ SBIಗೆ ₹2 ಸಾವಿರ ಕೋಟಿ ವಂಚನೆ: ಅನಿಲ್ ಅಂಬಾನಿ ವಿರುದ್ಧ CBI ಪ್ರಕರಣ.ವಿಡಿಯೊ: ಮೆಜೆಸ್ಟಿಕ್ ಮೆಟ್ರೊ ಆವರಣದಲ್ಲಿ ನಂದಿನಿ ಮಳಿಗೆ; ಸಿಎಂ ಉದ್ಘಾಟನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.