ಪುರಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ 31.25 ಗಿಗಾವಾಟ್ ಹಸಿರು ಇಂಧನವನ್ನು ದೇಶದಲ್ಲಿ ಉತ್ಪಾದಿಸಲಾಗಿದ್ದು, ಇದರಲ್ಲಿ ಸೋಲಾರ್ ವಿದ್ಯುತ್ನ ಪಾಲು 24.28 ಗಿಗಾವಾಟ್ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಶನಿವಾರ ತಿಳಿಸಿದರು.

ಒಡಿಶಾದಲ್ಲಿ 1.5 ಲಕ್ಷ ಚಾವಣಿ ಸೋಲಾರ್ ಯುಎಲ್ಎ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ‘ಜಾಗತಿಕ ಇಂಧನ ನಾಯಕರ ಶೃಂಗಸಭೆ–2025’ರಲ್ಲಿ ಘೋಷಿಸಿದ ಸಚಿವರು, ಇದರಿಂದ ರಾಜ್ಯದ 7ಲಕ್ಷದಿಂದ 8 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಒಂದು ಟೆರಾವಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಸುಮಾರು 70 ವರ್ಷಗಳನ್ನು ತೆಗೆದುಕೊಂಡರೆ (2022), ನಂತರದ ಎರಡು ವರ್ಷಗಳಲ್ಲಿ (2024) ಎರಡು ಟೆರಾವಾಟ್ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಜಗತ್ತು ಗಳಿಸಿದೆ ಎಂದರು.

ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಹೆಚ್ಚಳಕ್ಕೆ ಭಾರತವೇ ಪ್ರಮುಖ ಚಾಲಕ ಶಕ್ತಿಯಾಗಿದೆ. ಕಳೆದ 11 ವರ್ಷದ ಅವಧಿಯಲ್ಲಿ ದೇಶದ ಸೌರ ವಿದ್ಯುತ್ನ ಸಾಮರ್ಥ್ಯ 2.8 ಗಿಗಾವಾಟ್ನಿಂದ 130 ಗಿಗಾವಾಟ್ಗೆ ಹೆಚ್ಚಿದ್ದು, ಇದು ಶೇ 4,500 ಪಟ್ಟು ಏರಿಕೆಯಾಗಿದೆ. 2022ರಿಂದ 2024ರ ನಡುವೆ ಈ ಬೆಳವಣಿಗೆಯಾಗಿದೆ. ಜಾಗತಿಕ ಸೌರ ವಿದ್ಯುತ್ ವಲಯಕ್ಕೆ ದೇಶವು 46 ಗಿಗಾವಾಟ್ ಕೊಡುಗೆ ನೀಡಿದ್ದು, ಮೂರನೇ ಬೃಹತ್ ಕೊಡುಗೆಯಾಗಿದೆ ಎಂದು ಹೇಳಿದರು.

ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಶೃಂಗಸಭೆಯನ್ನು ಉದ್ಘಾಟಿಸಿದರು. ವಿವಿಧ ರಾಜ್ಯಗಳ ಇಂಧನ ಸಚಿವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.