ನವದೆಹಲಿ: ದೇಶದಲ್ಲಿ ಮೊದಲ ಹಂತದ ಕೊರೊನಾ ಲಸಿಕೆ ಹಾಕಿಸುವ ಕಾರ್ಯಕ್ರಮಕ್ಕೆ 140 ಕೋಟಿಯಿಂದ 180 ಕೋಟಿ ಡಾಲರ್ ಖರ್ಚಾಗಬಹುದು. ಜಾಗತಿಕ ಲಸಿಕೆ ಹಂಚಿಕೆ ಯೋಜನೆ ‘ಕೊವ್ಯಾಕ್ಸ್’ ಬೆಂಬಲದ ಹೊರತಾಗಿಯೂ ಇಷ್ಟು ವೆಚ್ಚವಾಗಬಹುದು ಎಂದು ಬಡ ದೇಶಗಳಲ್ಲಿ ಲಸಿಕೆ ನೀಡಿಕೆ ಹೆಚ್ಚಿಸುವ ಗುರಿಯೊಂದಿಗೆ ಖಾಸಗಿ, ಸರ್ಕಾರಿ ಸಹಭಾಗಿತ್ವದಲ್ಲಿ ರೂಪಿಸಲಾಗಿರುವ ಮೈತ್ರಿಕೂಟ ಜಿಎವಿಐ ಅಂದಾಜಿಸಿದೆ.

ಜಾಗತಿಕವಾಗಿ ಅತಿಹೆಚ್ಚು ಮಂದಿಗೆ ಕೊರೊನಾ ಸೋಂಕು ತಗುಲಿರುವ ದೇಶಗಳ ಯಾದಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಮುಂದಿನ 6ರಿಂದ 8 ತಿಂಗಳುಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ಹಾಕಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಆಸ್ಟ್ರಾಜೆನೆಕಾ, ರಷ್ಯಾದ ಸ್ಪುಟ್ನಿಕ್ ವಿ, ಝೈಡಸ್ ಕ್ಯಾಡಿಲಾ ಹಾಗೂ ದೇಶೀಯ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಗಳನ್ನು ಭಾರತ ಬಳಸಿಕೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ:ಅಮೆರಿಕದಲ್ಲಿ ತುರ್ತು ಬಳಕೆಗೆ 'ಮಾಡರ್ನಾ' ಕೋವಿಡ್-19 ಲಸಿಕೆ ಸಿದ್ಧ

ಹೆಚ್ಚು ಅಪಾಯದಲ್ಲಿರುವವರು ಸೇರಿದಂತೆ ಮೊದಲ ಹಂತವೊಂದರಲ್ಲೇ ಭಾರತದಲ್ಲಿ 60 ಕೋಟಿ ಜನರಿಗೆ ಲಸಿಕೆ ನೀಡಬೇಕಾಗಬಹುದು. ಇದಕ್ಕೆ ಭಾರತ ಎದುರಿಸುವ ಹಣಕಾಸು ಸವಾಲಿನ ಬಗ್ಗೆ ‘ರಾಯಿಟರ್ಸ್’ ಪರಿಶೀಲಿಸಿರುವ ದಾಖಲೆಗಳು ಬೆಳಕುಚೆಲ್ಲಿವೆ.

‘ಕೊವ್ಯಾಕ್ಸ್’ ಯೋಜನೆಯಡಿ ಭಾರತಕ್ಕೆ 19ರಿಂದ 25 ಕೋಟಿಯಷ್ಟು ಡೋಸ್‌ಗಳು ದೊರೆತರೆ ಉತ್ತಮ. ಉಳಿದ ಡೋಸ್‌ಗಳಿಗಾಗಿ ಸರ್ಕಾರವು 140 ಕೋಟಿ ಡಾಲರ್ ವ್ಯಯಿಸಬೇಕಾಗಬಹುದು ಎಂದು ಜಿಎವಿಐನ ಮೂರು ದಿನಗಳ ಸಭೆಯಲ್ಲಿ ಸಿದ್ಧಪಡಿಸಲಾಗಿರುವ ಅಪ್ರಕಟಿತ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ಅಮೆರಿಕದಲ್ಲಿ ಕೊರೊನಾ ಹಾವಳಿ ತೀವ್ರ: ದಿನಕ್ಕೆ 2 ಲಕ್ಷಕ್ಕೂ ಹೆಚ್ಚು ಪ್ರಕರಣ ವರದಿ

ಮತ್ತೊಂದೆಡೆ, ‘ಕೊವ್ಯಾಕ್ಸ್’ ಯೋಜನೆಯಡಿ 9.5 ಕೋಟಿಯಿಂದ 12.5 ಕೋಟಿಯಷ್ಟು ಡೋಸ್ ಮಾತ್ರ ದೊರೆತಲ್ಲಿ ಸರ್ಕಾರವು 180 ಕೋಟಿ ಡಾಲರ್ ಮೊತ್ತ ವ್ಯಯಿಸಬೇಕಾಗಬಹುದು ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.