ನವದೆಹಲಿ: ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ (ಎನ್ಸಿಇಎಲ್) ಮೂಲಕ ಯುಎಇ ಮತ್ತು ಬಾಂಗ್ಲಾದೇಶಕ್ಕೆ 64,400 ಟನ್ ಈರುಳ್ಳಿ ರಫ್ತು ಮಾಡಲು ಸರ್ಕಾರ ಅನುಮತಿ ನೀಡಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (DGFT) ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಬಾಂಗ್ಲಾದೇಶಕ್ಕೆ 50 ಸಾವಿರ ಟನ್ ಹಾಗೂ ಯುಎಇಗೆ 14,400 ಟನ್ ಈರುಳ್ಳಿ ರಫ್ತು ಮಾಡಲು ಅನುಮತಿ ನೀಡಲಾಗಿದೆ.

ಎನ್ಸಿಇಎಲ್ ಮೂಲಕ ಯುಎಇಗೆ 14,400 ಟನ್ ಈರುಳ್ಳಿ ರಫ್ತು ಮಾಡಲು ಅನುಮತಿ ನೀಡುವ ಅಧಿಸೂಚನೆಯು ಪ್ರತಿ ತ್ರೈಮಾಸಿಕಕ್ಕೆ 3,600 ಮೆಟ್ರಿಕ್ ಟನ್ ಪ್ರಮಾಣವನ್ನು ನಿಗದಿಪಡಿಸಿದೆ.

ಡಿಜಿಎಫ್ಟಿ ವಾಣಿಜ್ಯ ಸಚಿವಾಲಯದ ಒಂದು ಅಂಗವಾಗಿದೆ. ಇದು ಆಮದು ಮತ್ತು ರಫ್ತಿಗೆ ಸಂಬಂಧಿಸಿದ ಮಾನದಂಡಗಳೊಂದಿಗೆ ವ್ಯವಹರಿಸುತ್ತದೆ.

ಈರುಳ್ಳಿ ರಫ್ತು ನಿಷೇಧಿಸಲಾಗಿದೆಯಾದರೂ, ಸರ್ಕಾರವು ಸ್ನೇಹಪರ ರಾಷ್ಟ್ರಗಳೊಂದಿಗಿನ ಬದ್ಧತೆಯನ್ನು ಪೂರೈಸಲು ಕೆಲ ದೇಶಗಳಿಗೆ ಈರುಳ್ಳಿ ರಫ್ತಿಗೆ ಅನುಮತಿ ನೀಡಿದೆ.

ಕಳೆದ ವರ್ಷ ಡಿಸೆಂಬರ್ 8 ರಂದು , ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಬೆಲೆಗಳನ್ನು ನಿಯಂತ್ರಣದಲ್ಲಿಡಲು ಸರ್ಕಾರ ಈ ವರ್ಷದ ಮಾರ್ಚ್ 31 ರವರೆಗೆ ಈರುಳ್ಳಿ ರಫ್ತು ನಿಷೇಧಿಸಿತು.

ಈ ಹಿಂದೆ, ಗ್ರಾಹಕರಿಗೆ ಪರಿಹಾರ ನೀಡುವ ಸಲುವಾಗಿ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿಗೆ ₹25 ಸಬ್ಸಿಡಿ ದರದಲ್ಲಿ ಬಫರ್ ಈರುಳ್ಳಿ ದಾಸ್ತಾನು ಮಾರಾಟವನ್ನು ಹೆಚ್ಚಿಸಲು ಕೇಂದ್ರವು 2023ರ ಅಕ್ಟೋಬರ್ನಲ್ಲಿ ನಿರ್ಧರಿಸಿತ್ತು .

ಬೆಲೆ ನಿಯಂತ್ರಣಕ್ಕೆ ಸರ್ಕಾರ ಈ ಹಿಂದೆ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಆರ್ಥಿಕ ವರ್ಷದಲ್ಲಿ 2023 ಏಪ್ರಿಲ್ 1 ಮತ್ತು 2023ರ ಆಗಸ್ಟ್ 4ರ ನಡುವೆ ದೇಶದಿಂದ 9.75 ಲಕ್ಷ ಟನ್ ಈರುಳ್ಳಿಯನ್ನು ರಫ್ತು ಮಾಡಲಾಗಿದೆ.

ಮೌಲ್ಯದ ದೃಷ್ಟಿಯಿಂದ ಬಾಂಗ್ಲಾದೇಶ, ಮಲೇಷ್ಯಾ ಮತ್ತು ಯುಎಇ ಭಾರತದಿಂದ ಈರುಳ್ಳಿ ಆಮದು ಮಾಡಿಕೊಳ್ಳುವ ಅಗ್ರ ಮೂರು ದೇಶಗಳಾಗಿವೆ.
.ಈರುಳ್ಳಿ ರಫ್ತು ನಿಷೇಧಿಸಿ ಸರ್ಕಾರ ಆದೇಶ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.