ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದ್ರ ಗಡಿ ವಿವಾದ ಶಾಂತಿಯುತವಾಗಿ ಇತ್ಯರ್ಥ: ಮೋದಿ

Published 20 ಮೇ 2023, 11:32 IST
Last Updated 20 ಮೇ 2023, 11:32 IST
ಅಕ್ಷರ ಗಾತ್ರ

ನವದೆಹಲಿ: ‘ಅಂತರರಾಷ್ಟ್ರೀಯ ಕಾನೂನಿನ ಪರಿಧಿಯಲ್ಲಿಯೇ ಶಾಂತಿಯುತವಾಗಿ ಸಮುದ್ರದ ಗಡಿ ವಿವಾದಗಳ ಇತ್ಯರ್ಥಕ್ಕೆ ಭಾರತ ಬದ್ಧವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರ ಭಾಗ, ತೈವಾನ್‌ ಜಲಸಂಧಿಯಲ್ಲಿ ಚೀನಾವು ತನ್ನ ಸೇನಾ ಬಲವನ್ನು ವೃದ್ಧಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಪಾನ್‌ ಪತ್ರಿಕೆ ‘ಯೊಮಿಯುರಿ ಶಿಂಬುನ್’ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಬಾಂಗ್ಲಾದೇಶ ಜೊತೆಗಿನ ಸಮುದ್ರದ ಗಡಿ ವಿವಾದವನ್ನು ಭಾರತ ಈಗಾಗಲೇ ಯಶಸ್ವಿಯಾಗಿ ಬಗೆಹರಿಸಿಕೊಂಡಿದೆ’ ಎಂದರು.

‘ಜಾಗತಿಕ ಸಹಕಾರಕ್ಕೆ ಜಿ7 ಮತ್ತು ಜಿ20 ಶೃಂಗ ಸಭೆಗಳ ಪಾತ್ರ ನಿರ್ಣಾಯಕ. ಹವಾಮಾನ ವೈಪರೀತ್ಯ, ಆರ್ಥಿಕ ಚೇತರಿಕೆ, ಆರೋಗ್ಯ, ಆಹಾರ ಭದ್ರತೆ ಸೇರಿದಂತೆ ಶಾಂತಿ, ಸುರಕ್ಷತೆ ಕಾಪಾಡಲು ಈ ಸಭೆಗಳ ಪಾತ್ರ ಮಹತ್ವಪೂರ್ಣವಾಗಿದೆ’ ಎಂದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT