ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಬೆಳೆಯುವ ಕಾಫಿ ಜಗತ್ಪ್ರಸಿದ್ಧಿ ಪಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಾಸಿಕ ಮನ್ ಕಿ ಬಾತ್ನ 127ನೇ ಸಂಚಿಕೆಯಲ್ಲಿ ಮಾತನಾಡಿದ ಅವರು, ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದೇಶದ ವಿವಿಧೆಡೆ ಬೆಳೆಯುತ್ತಿರುವ ಕಾಫಿ, ಜಾಗತಿಕವಾಗಿ ಪ್ರಸಿದ್ಧಿ ಪಡೆಯುತ್ತಿದೆ. ಇತ್ತೀಚೆಗೆ, ಈಶಾನ್ಯ ಭಾರತದಲ್ಲೂ ಕಾಫಿ ಬೆಳೆಯಲಾಗುತ್ತಿದ್ದು, ಭಾರತದ ವಿವಿಧ ಬಗೆಯ ಕಾಫಿಗೆ ಇರುವ ಗುರುತನ್ನು ಬಲಪಡಿಸುತ್ತಿದೆ ಎಂದಿದ್ಧಾರೆ.

'ಭಾರತೀಯ ಕಾಫಿ ಪ್ರಪಂಚದಾದ್ಯಂತ ಬಹಳ ಜನಪ್ರಿಯವಾಗುತ್ತಿದೆ. ಕರ್ನಾಟಕದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ; ತಮಿಳುನಾಡಿನ , ಪಳನಿ, ಶೇವರಾಯ್, ನೀಲಗಿರಿ ಮತ್ತು ಅಣ್ಣಾಮಲೈ ಪ್ರದೇಶಗಳಾಗಿರಬಹುದು; ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ನೀಲಿಗಿರಿ ಪ್ರದೇಶವಾಗಿರಬಹುದು; ಅಥವಾ ಕೇರಳದ ವಯನಾಡ್, ತಿರುವಾಂಕೂರು ಮತ್ತು ಮಲಬಾರ್ ಪ್ರದೇಶಗಳಾಗಿರಬಹುದು. ದೇಶದ ವಿವಿಧೆಡೆ ಬೆಳೆಯುವ ಕಾಫಿಯ ವೈವಿಧ್ಯತೆ ನಿಜಕ್ಕೂ ಗಮನಾರ್ಹವಾಗಿದೆ’ಎಂದು ಅವರು ಹೇಳಿದರು.

ಕೊರಾಪುಟ್ (ಒಡಿಶಾ) ಕಾಫಿ ಕೂಡ ಜನಪ್ರಿಯತೆಯನ್ನು ಗಳಿಸುತ್ತಿದೆ ಎಂದು ಮೋದಿ ಹೇಳಿದರು.

ಕೆಲವರು, ಕಾಫಿ ಕೃಷಿಯ ಮೇಲಿನ ತಮ್ಮ ಉತ್ಸಾಹವನ್ನು ಮುಂದುವರಿಸಲು ಲಾಭದಾಯಕ ಕಾರ್ಪೊರೇಟ್ ಉದ್ಯೋಗಗಳನ್ನು ತೊರೆದಿದ್ದಾರೆ ಎಂದೂ ಅವರು ಶ್ಲಾಘಿಸಿದರು.

‘ಕೆಲಸ ಬಿಟ್ಟು ಕಾಫಿ ಬೆಳೆಯಲು ಮುಂದಾದವರು ಯಶಸ್ಸು ಗಳಿಸಿದ್ದಾರೆ. ಹಲವು ಮಹಿಳೆಯರ ಜೀವನ ಸಹ ಇದರಿಂದ ಹಸನಾಗಿದೆ’ಎಂದಿದ್ದಾರೆ.

ವಿಶಿಷ್ಟ ವಾತಾವರಣಕ್ಕೆ ಹೆಸರುವಾಸಿಯಾಗಿರುವ ಕೊರಾಪುಟ್ ಪ್ರದೇಶದಲ್ಲಿ ಅತ್ಯುತ್ತಮ ದರ್ಜೆಯ ಅರೇಬಿಕಾ ಕಾಫಿ ಬೆಳೆಯಲಾಗುತ್ತದೆ. ಇಲ್ಲಿ 5,000 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ ಎಂದಿದ್ಧರೆ.

ದೇಶದ ಒಟ್ಟು ಕಾಫಿ ಉತ್ಪನ್ನದ ಪೈಕಿ ಶೇ 70ರಷ್ಟನ್ನು ಕರ್ನಾಟಕದಲ್ಲೇ ಬೆಳೆಯಲಾಗುತ್ತಿದೆ. ನಂತರದ ಸ್ಥಾನದಲ್ಲಿ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಒಡಿಶಾಗಳಿವೆ.

ಈ ವರ್ಷದ ಏಪ್ರಿಲ್–ಸೆಪ್ಟೆಂಬರ್ ಹಣಕಾಸು ವರ್ಷದಲ್ಲಿ ದೇಶದ ಕಾಫಿ ರಫ್ತು ಶೇ 12ರಷ್ಟು ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.