ನವದೆಹಲಿ: ರೈಲು ಬೋಗಿ, ಕೋಚ್ಗಳು, ಲೋಕೊಮೋಟಿವ್ಸ್ ಹಾಗೂ ಪ್ರೊಪಲ್ಷನ್ ಸಿಸ್ಟಮ್ ಸೇರಿದಂತೆ ಹಲವು ಉಪಕರಣಗಳ ಜಾಗತಿಕ ರಫ್ತುದಾರನಾಗಿ ಭಾರತವು ವೇಗವಾಗಿ ಹೊರಹೊಮ್ಮುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

‘ಭಾರತದ ರೈಲ್ವೆ ಉಪಕರಣಗಳು ಹೆಚ್ಚಾಗಿ ಜಾಗತಿಕ ಮಾರುಕಟ್ಟೆಯನ್ನು ತಲುಪುತ್ತಿವೆ. 16 ರಾಷ್ಟ್ರಗಳು ಭಾರತದ ರೈಲು ಉಪಕರಣಗಳನ್ನು ಬಳಸುತ್ತಿವೆ. ಉತ್ಪನ್ನಗಳ ವಿನ್ಯಾಸ, ಅಭಿವೃದ್ಧಿ ಹಾಗೂ ಪೂರೈಕೆಯೆಡೆಗೆ ಭಾರತದ ಬದ್ಧತೆಯನ್ನು ತೋರಿಸುತ್ತದೆ’ ಎಂದು ಅದು ಹೇಳಿದೆ.

‘ಆಸ್ಟ್ರೇಲಿಯಾ, ಕೆನಡಾ, ರಷ್ಯಾ, ಸೌದಿ ಅರೇಬಿಯಾ, ಫ್ರಾನ್ಸ್, ಮೆಕ್ಸಿಕೊ, ರೊಮೇನಿಯಾ, ಸ್ಪೇನ್, ಜರ್ಮನಿ, ಇಟಲಿ, ಶ್ರೀಲಂಕಾ, ಮ್ಯಾನ್ಮಾರ್, ಬಾಂಗ್ಲಾದೇಶ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತದ ರೈಲು ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿವೆ. ‘ಮೇಕ್ ಇನ್ ಇಂಡಿಯಾ’ ಹಾಗೂ ‘ಮೇಕ್ ಫಾರ್ ದಿ ವಲ್ರ್ಡ್’ ಉಪಕ್ರಮಗಳ ಅಡಿಯಲ್ಲಿ ರಫ್ತು ಮಾಡಲಾಗುತ್ತಿದೆ’ ಎಂದು ಇಲಾಖೆ ತಿಳಿಸಿದೆ.

ಬಿಹಾರದ ಲೋಕೊಮೋಟಿವ್ ಉತ್ಪಾದನಾ ಘಟಕದಿಂದ ಜಿನೆವಾಗೆ ಮೊದಲ ಬಾರಿ ಜೂನ್ನಲ್ಲಿ ಲೋಕೊಮೋಟಿವ್ ರಫ್ತು ಮಾಡಲಾಯಿತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.