ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರವು ಹೊಸ ರೀತಿಯ ಗೋಲ್ಡನ್ ವೀಸಾವನ್ನು ಪ್ರಾರಂಭಿಸಿದ್ದು, ಕೆಲವು ಷರತ್ತುಗಳೊಂದಿಗೆ ವೀಸಾ ಪಡೆಯಬಹುದಾಗಿದೆ.

ಇಲ್ಲಿಯವರೆಗೆ, ಭಾರತೀಯರು ದುಬೈನ ಗೋಲ್ಡನ್ ವೀಸಾ ಪಡೆಯಬೇಕೆಂದರೆ, ಕನಿಷ್ಠ ಎರಡು ಮಿಲಿಯನ್ ದಿರ್ಹಮ್ಸ್ (₹4.66ಕೋಟಿ) ಮೌಲ್ಯದ ಆಸ್ತಿಯಲ್ಲಿ ಹೂಡಿಕೆ ಮಾಡುವುದು ಅಥವಾ ಆ ದೇಶದ ವ್ಯಾಪಾರದಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡಿರಬೇಕೆಂಬ ಷರತ್ತು ಇತ್ತು.

ಈಗ ‘ಹೊಸ ನಾಮನಿರ್ದೇಶನ ಆಧಾರಿತ ವೀಸಾ ನೀತಿ’ಯ ಅಡಿಯಲ್ಲಿ, ಭಾರತೀಯರು ಸುಮಾರು 1,00,000 ದಿರ್ಹಮ್ಸ್ (ಸುಮಾರು ₹23.30 ಲಕ್ಷ.) ಶುಲ್ಕವನ್ನು ಪಾವತಿಸುವ ಮೂಲಕ ಯುಎಇಯ ಜೀವಿತಾವಧಿಯ ‘ಗೋಲ್ಡನ್ ವೀಸಾ’ವನ್ನು ಪಡೆಯಬಹುದು ಎಂದು ಫಲಾನುಭವಿಗಳು ಮತ್ತು ಪ್ರಕ್ರಿಯೆಯಲ್ಲಿ ತೊಡಗಿರುವ ಜನರು ಪಿಟಿಐಗೆ ತಿಳಿಸಿದ್ದಾರೆ.

ಮೂರು ತಿಂಗಳಲ್ಲಿ 5,000ಕ್ಕೂ ಹೆಚ್ಚು ಭಾರತೀಯರು ಈ ನಾಮನಿರ್ದೇಶನ ಆಧಾರಿತ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.

ಈ ಹೊಸ ರೀತಿಯ ವೀಸಾ ವಿತರಣೆಗೆ ಮೊದಲ ಹಂತದಲ್ಲಿ ಭಾರತ ಮತ್ತು ಬಾಂಗ್ಲಾದೇಶವನ್ನು ಆಯ್ಕೆ ಮಾಡಲಾಗಿದೆ. ಭಾರತದಲ್ಲಿ ಪ್ರಾಯೋಗಿಕ ನಾಮನಿರ್ದೇಶನ ಆಧಾರಿತ ಗೋಲ್ಡನ್ ವೀಸಾ ಪ್ರಕ್ರಿಯೆಯನ್ನು ಪರೀಕ್ಷಿಸಲು ರಾಯದ್ ಗ್ರೂಪ್ ಎಂಬ ಕನ್ಸಲ್ಟೆನ್ಸಿ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ.

ರಾಯದ್ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ರಾಯದ್ ಕಮಲ್ ಅಯೂಬ್, ಭಾರತೀಯರಿಗೆ ಯುಎಇಯ ಗೋಲ್ಡನ್ ವೀಸಾ ಪಡೆಯಲು ಇದು ಒಂದು ಸುವರ್ಣಾವಕಾಶ ಎಂದು ಹೇಳಿದ್ದಾರೆ.

ಈ ವೀಸಾಕ್ಕೆ ಅರ್ಜಿ ಸಲ್ಲಿಸಿದ ಬಳಿಕ, ಅರ್ಜಿದಾರರ ಹಿನ್ನೆಲೆಯನ್ನು ಪರಿಶೀಲಿಸುತ್ತೇವೆ. ಇದರಲ್ಲಿ ಹಣ ಅಕ್ರಮ ವರ್ಗಾವಣೆ ಮತ್ತು ಕ್ರಿಮಿನಲ್ ದಾಖಲೆ, ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನೂ ಪರಿಶೀಲನೆಯೂ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.
.ಅಧಿಕೃತ ನಿವಾಸದಿಂದ ಮಾಜಿ ಸಿಜೆಐ ಚಂದ್ರಚೂಡ್ ತೆರವಿಗೆ SC ಆಡಳಿತ ಮಂಡಳಿ ಪತ್ರ.ದೇಗುಲಗಳಲ್ಲಿ ಗೋಶಾಲೆ, ಧರ್ಮಬೋಧನಾ ಸಂಸ್ಥೆ, ಆಸ್ಪತ್ರೆ ಅಗತ್ಯ: ಕೇರಳ ರಾಜ್ಯಪಾಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.