ಟಿಮ್, ನೀವು ನನ್ನ ಸ್ನೇಹಿತ. ನೀವು ಅಮೆರಿಕದಲ್ಲಿ 500 ಬಿಲಿಯನ್ ಡಾಲರ್‌ನಷ್ಟು (ಸುಮಾರು ₹43 ಲಕ್ಷ ಕೋಟಿ) ಹೂಡಿಕೆ ಮಾಡಲಿದ್ದೀರಿ. ಆದರೆ, ನಾನು ಈಗಷ್ಟೇ ಕೇಳಲ್ಪಟ್ಟೆ. ನೀವು ಭಾರತದಲ್ಲಿ ಸಾಕಷ್ಟು ಹೂಡಿಕೆ ಮಾಡಲಿದ್ದೀರಿ ಎಂದು. ಭಾರತದಲ್ಲಿ ನೀವು ಐಫೋನ್ ತಯಾರಿಕೆ ಮಾಡುವುದು ನನಗೆ ಇಷ್ಟವಿಲ್ಲ. ಭಾರತದಲ್ಲಿ ತಯಾರಾಗುವ ಐಫೋನ್‌ಗಳು ಅಮೆರಿಕದಲ್ಲಿ ಮಾರಾಟವಾಗುವುದು ನಿಲ್ಲಬೇಕು. ಅವರದ್ದು ಅವರು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ಅದು ಭಾರಿ ಸುಂಕ ವಿಧಿಸುವ ದೇಶ. ಆ ದೇಶದಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಚೀನಾದವರು ಇಷ್ಟು ವರ್ಷಗಳಲ್ಲಿ ನಿಮಗೆ ಮಾಡಿಕೊಟ್ಟ ಎಲ್ಲ ಅನುಕೂಲಗಳನ್ನೂ ನಾವು ಮಾಡಿಕೊಡುತ್ತೇವೆ. ನೀವು ನಮ್ಮ ದೇಶದಲ್ಲಿ ಐಫೋನ್ ತಯಾರಿಕೆ ಮಾಡಿ.
ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಅಮೆರಿಕದ ಬಹುತೇಕ ಸರಕುಗಳಿಗೆ ಶೂನ್ಯ ಸುಂಕ ನೀತಿ ಅನುಸರಿಸಲು ಭಾರತ ಮುಂದಾಗಿದೆ ಎಂಬ ಟ್ರಂಪ್ ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಹಿಸುವುದು ಏಕೆ?