ನವದೆಹಲಿ: ‘ಚಂದ್ರನ ದಕ್ಷಿಣ ಧ್ರುವದ ಮೇಲೆ ಆಗಸ್ಟ್ 23ರಂದು ‘ವಿಕ್ರಮ್’ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಲು ಪ್ರತಿಕೂಲ ವಾತಾವರಣ ಎದುರಾದರೆ ಆಗಸ್ಟ್ 27ರಂದು ಮತ್ತೆ ಸುರಕ್ಷಿತವಾಗಿ ಇಳಿಸಲು ಸಿದ್ಧತೆ ನಡೆಸಲಾಗಿದೆ’ ಎಂದು ಇಸ್ರೊದ ಅಹಮದಾಬಾದ್‌ನ ಸ್ಪೇಸ್ ಅಪ್ಲಿಯೇಷನ್ ಸೆಂಟರ್‌ನ ನಿರ್ದೇಶಕ ನೀಲೇಶ್ ಎಂ. ದೇಸಾಯಿ ಹೇಳಿದ್ದಾರೆ.

ಆಗಸ್ಟ್ 23ರಂದು ಸಾಫ್ಟ್‌ಲ್ಯಾಂಡಿಂಗ್‌ನ ನಿಗದಿತ ಸಮಯಕ್ಕೂ ಎರಡು ಗಂಟೆಗೂ ಮೊದಲೇ ಚಂದ್ರನ ಮೇಲ್ಮೈನ ಪರಿಸ್ಥಿತಿ, ಲ್ಯಾಂಡರ್‌ನ ಸ್ಥಿತಿ ಆಧರಿಸಿ ಸಾಫ್ಟ್‌ಲ್ಯಾಂಡಿಂಗ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಲ್ಯಾಂಡರ್ ಮೇಲೆ ನಿಗಾ

‘ಚಂದ್ರಯಾನ 3’ರ ವಿಕ್ರಮ್ ಲ್ಯಾಂಡರ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಹಾಗಾಗಿ, ಮುಂದಿನ ಎರಡು ದಿನಗಳಲ್ಲಿ ಯಾವುದೇ ಆಕಸ್ಮಿಕ ಅವಘಡ ಸಂಭವಿಸುತ್ತದೆ ಎಂಬುದನ್ನು ನಿರೀಕ್ಷಿಸಿಲ್ಲ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರೊಟ್ಟಿಗೆ ಸೋಮವಾರ ‘ಚಂದ್ರಯಾನ 3’ರ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ‘ಮುಂದಿನ ಎರಡು ದಿನಗಳ ಕಾಲವೂ ‘ಚಂದ್ರಯಾನ 3’ರ ಮೇಲೆ ನಿರಂತರ ಕಣ್ಗಾವಲು ಇಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.