ನವದೆಹಲಿ: ಕಾಮಿಡಿಯನ್ ಕಪಿಲ್ ಶರ್ಮಾ ಅವರ ಕೆನಡಾದಲ್ಲಿರುವ ರೆಸ್ಟೋರೆಂಟ್ ಮೇಲೆ ಗುಂಡಿನ ದಾಳಿ ಮಾಡಿದ ಆರೋಪದ ಮೇಲೆ ಗ್ಯಾಂಗ್ಸ್ಟಾರ್ ಬಂಧು ಮಾನ್ ಸಿಂಗ್ ಅನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಕೆನಡಾ ಮೂಲದ ಗ್ಯಾಂಗ್ಸ್ಟಾರ್ ಗೋಲ್ಡಿ ಧಿಲ್ಲನ್ನ ಸಹಚರನಾಗಿ ಗುರುತಿಸಿಕೊಂಡಿರುವ ಬಂಧು ಮಾನ್ ಸಿಂಗ್ ಮೇಲೆ ವಿದೇಶದಲ್ಲಿ ಹಲವು ಉದ್ಯಮಿಗಳನ್ನು ಸುಲಿಗೆ ಮಾಡಿದ ಆರೋಪವಿದೆ.

ಕಪಿಲ್ ಶರ್ಮಾಗೆ ಬೆದರಿಕೆ ಹಾಕುವ ಉದ್ದೇಶದಿಂದ ಅವರ ರೆಸ್ಟೋರೆಂಟ್ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಗುಪ್ತಚರ ಮಾಹಿತಿಯ ಮೇರೆಗೆ ಬಂಧು ಮಾನ್ ಸಿಂಗ್ ಅನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಆರೋಪಿ ಬಂಧು ಮಾನ್ ಸಿಂಗ್ನನ್ನು ಬಂಧಿಸುವ ವೇಳೆ, ಗುಂಡುಗಳಿದ್ದ ಚೈನೀಸ್ ಪಿಸ್ತೂಲ್ ಅನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಅವನ ಕೈವಾಡ ಹಾಗೂ ವಿದೇಶದಲ್ಲಿನ ಕೃತ್ಯಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಭಾರತ ಹಾಗೂ ವಿದೇಶದಲ್ಲಿ ಗೋಲ್ಡಿ ಧಿಲ್ಲನ್ ಗ್ಯಾಂಗ್ನ ಚಟುವಟಿಕೆಗಳ ಕುರಿತು ಕೂಡ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.