ತಿರುವನಂತಪುರಂ: ಕೇರಳದ ಕೊಲ್ಲಂನಲ್ಲಿ ಹಾವಿನಿಂದ ಕಚ್ಚಿಸಿ ಹೆಂಡತಿಯನ್ನು ಕೊಂದಿದ್ದಕ್ಕಾಗಿ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಮೇ 6 ರಂದು ಪತಿ ಪೂರ್ವಯೋಜಿತ ಉದ್ದೇಶದಿಂದ ತನ್ನೊಂದಿಗೆ ಹಾವನ್ನು ತಂದು ಮಲಗಿದ್ದ ಪತ್ನಿಯ ಮೇಲೆ ಎಸೆದ ಘಟನೆ ನಡೆದಿದೆ.

ನಿದ್ರಾವಸ್ಥೆಯಲ್ಲಿದ್ದ ಪತ್ನಿಗೆ ಹಾವು ಎರಡು ಬಾರಿ ಕಚ್ಚುವುದನ್ನು ಪತಿ ನೋಡುತ್ತ ನಿಂತಿದ್ದನೆಂದು ಗೊತ್ತಾಗಿದೆ.

ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರುವ ಸೂರಜ್ ತನ್ನ ಪತ್ನಿ ಉತ್ರಾಳನ್ನು ಕೊಲ್ಲಲು ಹಾವನ್ನು ಖರೀದಿಸಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ.

ಆಕೆಯ ಹಣ ಮತ್ತು ಚಿನ್ನವನ್ನು ತೆಗೆದುಕೊಂಡು ಬೇರೊಬ್ಬರನ್ನು ಮದುವೆಯಾಗುವುದು ಅವನ ಯೋಜನೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 7 ರಂದು ಕೊಲ್ಲಂನಲ್ಲಿರುವ ತಮ್ಮ ಪತಿಯ ಮನೆಯಲ್ಲಿ ಉತ್ರಾ ಶವವಾಗಿ ಪತ್ತೆಯಾಗಿದ್ದಾರೆ. ಆಕೆಗೆ ಹಾವು ಕಚ್ಚಿ ಮೃತಳಾಗಿದ್ದಾಳೆಂದು ಕುಟುಂಬಸ್ಥರಿಗೆ ತಿಳಿದಾಗ, ಅವರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.