ತಿರುವನಂತಪುರಂ: ಚಳಿಗಾಲ ಶುರುವಾಗುತ್ತಿದ್ದಂತೆಯೇ ಕೇರಳಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗರಿಗೆದರುತ್ತೆ.

ಈ ಹಿನ್ನೆಲೆಯಲ್ಲಿ ಕೇರಳ ಪ್ರವಾಸೋದ್ಯಮದ ಸರ್ಕಾರಿ ಸ್ವಾಮ್ಯದ ನಿರ್ವಹಣಾ ಸಂಸ್ಥೆ ಕೇರಳ ಟ್ರಾವೆಲ್ ಮಾರ್ಟ್ ಸೊಸೈಟಿ (ಕೆಟಿಎಂ) ಪ್ರವಾಸಿಗರಿಗೆ ಕೆಲ ಎಚ್ಚರಿಕೆಯ ಸೂಚನೆಗಳನ್ನು ನೀಡಿದೆ.

ಟ್ರಾವೆಲ್ ಏಜನ್ಸಿ ಹಾಗೂ ಟ್ರಾವೆಲ್ ಬುಕಿಂಗ್ ಸೆಂಟರ್ಗಳ ಹೆಸರಿನಲ್ಲಿ ಆನ್ಲೈನ್ ವಂಚಕರು ಕೇರಳಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು ಗುರಿಯಾಗಿಸುತ್ತಿದ್ದಾರೆ. ಪ್ರವಾಸಿಗರ ವಿವರಗಳನ್ನು ಪಡೆದುಕೊಂಡು ಬುಕಿಂಗ್ ಕ್ಯಾನ್ಸಲ್, ಅಪ್ಡೇಟ್ ಮುಂತಾದವುಗಳ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದಾರೆ ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಕೊಚ್ಚಿ ಹಾಗೂ ಕುಮಾರವೊಕೊಮ್ನಲ್ಲಿ ಕೆಲ ಪ್ರಕರಣಗಳು ದಾಖಲಾಗಿದ್ದು ಪ್ರವಾಸಿಗರು ಆನ್ಲೈನ್ ವಂಚಕರಿಂದ ಎಚ್ಚರವಾಗಿರಬೇಕು ಎಂದು ತಿಳಿಸಿದೆ.

ಇಮೇಲ್, ಕಾಲ್, ಮೆಸೆಜ್ಗಳ ಮುಖಾಂತರ ವಂಚಕರು ಕೇರಳಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು ಗುರಿಯಾಗಿಸುತ್ತಿದ್ದಾರೆ. ಅಧಿಕೃತ ಟ್ರಾವೆಲ್ ಎಜೆಂಟ್ರು ಹಾಗೂ ಬುಕಿಂಗ್ ಎಜನ್ಸಿಗಳ ಜೊತೆ ಮಾತ್ರ ಸಂವಹನ ಮಾಡಬೇಕು. ಸಂದೇಹ ಬಂದರೆ ಕೇರಳ ಸೈಬರ್ ಪೊಲೀಸರಿಗೆ ದೂರು ನೀಡಬೇಕು ಎಂದು ಕೆಟಿಎಂ ಅಧ್ಯಕ್ಷ ಜಾಯ್ ಪ್ರದೀಪ್ ಅವರು ತಿಳಿಸಿದ್ದಾರೆ.

2000 ರಲ್ಲಿ ಸ್ಥಾಪನೆಯಾಗಿರುವ ಕೇರಳ ಟ್ರಾವೆಲ್ ಮಾರ್ಟ್ ಸೊಸೈಟಿ ಕೇರಳ ಪ್ರವಾಸೋದ್ಯಮದ ಅತಿದೊಡ್ಡ ನಿರ್ವಹಣಾ ಸಂಸ್ಥೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.