ಕೋಲ್ಕತ್ತ: ನಗರದ ಕಾನೂನು ಕಾಲೇಜು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಗಾಗಿ ಐವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಈ ಘಟನೆ ಸಂಬಂಧ ತಕ್ಷಣದಿಂದಲೇ ಎಸ್ಐಟಿ ತಂಡವು ತನಿಖೆ ಆರಂಭಿಸಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆಯ ದೂರಿನ ಆಧಾರದ ಮೇರೆಗೆ ಪ್ರಮುಖ ಆರೋಪಿಗಳಾದ ಮನೋಜಿತ್ ಮಿಶ್ರಾ, ಪ್ರಮಿತ್ ಮುಖರ್ಜಿ ಮತ್ತು ಜೈದ್ ಅಹ್ಮದ್ ಅವರನ್ನು ಗುರುವಾರ ಪೊಲೀಸರು ಬಂಧಿಸಿದ್ದರು.
.ಕೋಲ್ಕತ್ತ | ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಭದ್ರತಾ ಸಿಬ್ಬಂದಿ ಬಂಧನ.ವಿಮಾನ ಅಪಘಾತ ತನಿಖಾ ಮಂಡಳಿ ಮುಖ್ಯಸ್ಥ ಯುಗಂಧರ್ಗೆ ‘ಎಕ್ಸ್’ ಶ್ರೇಣಿಯ ಭದ್ರತೆ.
ಇಂದು (ಶನಿವಾರ) ಬೆಳಿಗ್ಗೆ ಕಾಲೇಜಿನ ಸೆಕ್ಯೂರಿಟಿ ಗಾರ್ಡ್ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ನ್ಯಾಯಾಲಯವು ಮೂವರು ಆರೋಪಿಗಳನ್ನು 4 ದಿನಗಳ ಅವಧಿಗೆ ಪೊಲೀಸರ ವಶಕ್ಕೆ ನೀಡಿದೆ.

ಜೂನ್ 25 ರಂದು ದಕ್ಷಿಣ ಕೋಲ್ಕತ್ತದ ಕಾನೂನು ಕಾಲೇಜು ಕಸ್ಬಾ ಕ್ಯಾಂಪಸ್ನಲ್ಲಿ ಈ ಘಟನೆ ನಡೆದಿದೆ. ಬಂಧಿತ ಮೂವರಲ್ಲಿ ಇಬ್ಬರು ಅದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಒಬ್ಬ ಹಳೆಯ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಾಲೇಜಿನ ಹಳೆಯ ವಿದ್ಯಾರ್ಥಿಯು ಅದೇ ಕಾಲೇಜಿನಲ್ಲಿ ಗುತ್ತಿಗೆ ಆಧಾರದಲ್ಲಿ ಬೋಧಕೇತರ ಸಿಬ್ಬಂದಿಯಾಗಿದ್ದ. ಅಲ್ಲದೇ, ಅಲಿಪೋರ್ ಪೊಲೀಸ್ ಹಾಗೂ ಸೆಷನ್ ಕೋರ್ಟ್ನಲ್ಲಿ ಕ್ರಿಮಿನಲ್ ವಕೀಲನಾಗಿ ಕಾರ್ಯನಿರ್ವಹಿಸುತ್ತಿದ್ದಾನೆಂದು ಕಾಲೇಜು ಮೂಲಗಳು ತಿಳಿಸಿವೆ.
.ವಿಭಿನ್ನ ಲುಕ್ನಲ್ಲಿ ನಾನಿ: ‘ದಿ ಪ್ಯಾರಡೈಸ್’ ಚಿತ್ರ ಮುಂದಿನ ವರ್ಷ ತೆರೆಗೆ.61ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಜೆಫ್ ಬಿಜೋಸ್: ಮದುವೆಗೆ ₹480 ಕೋಟಿ ಖರ್ಚು!.ರೀಲ್ಸ್ ಹುಚ್ಚು: ಐಫೋನ್ಗಾಗಿ ಬೆಂಗಳೂರು ನಿವಾಸಿಯನ್ನು ಕೊಂದ ಉತ್ತರಪ್ರದೇಶ ಬಾಲಕರು.ಯುವಕನಿಗೆ ಸುಳ್ಳು ಹೇಳಿಕೆ ನೀಡಲು ಒತ್ತಾಯ; MP ಕಾಂಗ್ರೆಸ್ ಅಧ್ಯಕ್ಷ ವಿರುದ್ಧ FIR.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.