ನವದೆಹಲಿ: ‘ಭಾರತೀಯ ವಾಯುಪಡೆ 50ಕ್ಕಿಂತಲೂ ಕಡಿಮೆ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಿ, ಪಾಕಿಸ್ತಾನದ ಸೇನಾನೆಲೆಗಳಿಗೆ ಧಕ್ಕೆ ಉಂಟುಮಾಡಿತು. ಇದರಿಂದ ವಿಚಲಿತಗೊಂಡ ಪಾಕಿಸ್ತಾನವು, ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಮೇ 10ರ ಮಧ್ಯಾಹ್ನದ ವೇಳೆ ಬೇಡಿಕೊಂಡಿತು’ ಎಂದು ವೈಸ್ ಚೀಫ್ ಆಫ್ ಏರ್ ಸ್ಟಾಫ್ ಏರ್ ಮಾರ್ಷಲ್ ನರ್ಮದೇಶ್ವರ ತಿವಾರಿ ಶನಿವಾರ ಹೇಳಿದ್ದಾರೆ.

‘ಪಾಕಿಸ್ತಾನ ಸೇನೆ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಲು ಭಾರತೀಯ ವಾಯುಪಡೆ ಸಮರ್ಥವಾಗಿತ್ತು’ ಎಂದು ಅವರು ಆಪರೇಷನ್ ಸಿಂಧೂರ ಮೆಲುಕು ಹಾಕಿದರು.

ಏರ್ ಮಾರ್ಷಲ್ ತಿವಾರಿ ಅವರು ಆಪರೇಷನ್ ಸಿಂಧೂರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಎನ್ಡಿಟಿವಿ ಆಯೋಜಿಸಿದ್ದ ‘ರಕ್ಷಣಾ ಶೃಂಗಸಭೆ’ಯಲ್ಲಿ ಮಾತನಾಡಿದ ಅವರು, ‘50ಕ್ಕಿಂತಲೂ ಕಡಿಮೆ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿ, ಶತ್ರುದೇಶದ ಸೇನೆ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ವಿದ್ಯಮಾನ ಹಿಂದೆಂದೂ ನಡೆದಿರಲಿಲ್ಲ’ ಎಂದರು.

‘ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ನಾಶ ಮಾಡಿ, ನಮ್ಮ ಉದ್ದೇಶದ ಬಗ್ಗೆ ಪಾಕಿಸ್ತಾನಕ್ಕೆ ತಿಳಿಸಲಾಯಿತು. ದಾಳಿಯನ್ನು ತೀವ್ರಗೊಳಿಸಲು ಭಾರತ ಬಯಸುತ್ತಿಲ್ಲ ಎಂಬುದನ್ನು ಕೂಡ ಸ್ಪಷ್ಟಪಡಿಸಲಾಯಿತು. ಆದರೆ, ಮೇ 9–10ರ ರಾತ್ರಿ ಪಾಕಿಸ್ತಾನ ಪಡೆಗಳಿಂದ ದಾಳಿ ನಡೆದಾಗ, ತಕ್ಕ ಉತ್ತರ ನೀಡಲು ನಿರ್ಧರಿಸಿ, ಕಾರ್ಯಾಚರಣೆ ನಡೆಸಲಾಯಿತು’ ಎಂದು ತಿವಾರಿ ವಿವರಿಸಿದರು.

ಆಪರೇಷನ್ ಸಿಂಧೂರ ವೇಳೆ ನಾಶ ಮಾಡಲಾದಂತಹ ಪಾಕಿಸ್ತಾನದ ಕೆಲ ಗುರಿಗಳನ್ನು 1971ರಲ್ಲಿ ನಡೆದ ಯುದ್ಧದ ವೇಳೆ ತಲುಪಿರಲೇ ಇಲ್ಲ
ಏರ್ ಮಾರ್ಷಲ್ ನರ್ಮದೇಶ್ವರ ತಿವಾರಿ, ವೈಸ್ ಚೀಫ್ ಆಫ್ ಏರ್ ಸ್ಟಾಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.