ನವದೆಹಲಿ:ಸಂಸತ್‌ನಲ್ಲಿ ಅವಿಶ್ವಾಸ ಮತದ ಮೇಲೆ ನಡೆಯುತ್ತಿರುವ ಚರ್ಚೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ‘ಕಣ್ಣೀರು’ ವಿಷಯ ಪ್ರಸ್ತಾಪವಾಗಿ, ಪ್ರತಿಧ್ವನಿಸಿತು.

ಟಿಡಿಪಿ ಅವಿಶ್ವಾಸ ನಿರ್ಣಯ ಮಂಡಿಸಿದ ಬಳಿಕ, ಪ್ರತಿಕ್ರಿಯಿಸಿ ಮಾತನಾಡಿದ ಬಿಜೆಪಿ ಸಂಸದ ರಾಕೇಶ್ ಸಿಂಗ್, ‘ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದ್ದಾರೆ. ಕಣ್ಣೀರು ಹಾಕಿದ್ದನ್ನು ಇಡೀ ದೇಶವೇ ನೋಡಿದೆ’ ಎಂದು ಪ್ರಸ್ತಾಪಿಸಿದರು.

‘ಒಂದು ಕುಟುಂಬದ ಸರ್ಕಾರಕ್ಕೆ ಮಾತ್ರ ಕಾಂಗ್ರೆಸ್ ಬೆಂಬಲ ನೀಡಿದೆ. ಜೆಡಿಎಸ್ ಜತೆಗೂಡಿ ಇನ್ನೆಷ್ಟು ಪಕ್ಷಗಳು ವಿಷ ಕುಡಿಯಬೇಕು?’ ಎಂದು ರಾಕೇಶ್ ಸಿಂಗ್ ಎಂದು ಕುಟುಕಿದರು.

ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ನಡೆದ ಸಭಾ ಕಾರ್ಯಕ್ರಮವೊಂದರಲ್ಲಿ ತಮ್ಮ ಅಂತರಾಳದ ನೋವನ್ನು ತೋಡಿಕೊಂಡು ಕಣ್ಣೀರು ಹಾಕಿದ್ದರು.

ಸಿಎಂ ಕಣ್ಣೀರು ಮೈತ್ರಿ ಪಕ್ಷ ಕಾಂಗ್ರೆಸ್ ನೀಡುತ್ತಿರುವ ಅಸಹಕಾರದ್ದು ಎಂದು ವಿಪಕ್ಷಗಳು ಬಣ್ಣಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.