ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಶ್ವಾಸದ ಮೇಲೆ ಚರ್ಚೆ, ಹೊರನಡೆದ 19ಬಿಜೆಡಿ ಸದಸ್ಯರು, ‘ಧರ್ಮಯುದ್ಧ‘ ಎಂದ ಟಿಡಿಪಿ

Last Updated 20 ಜುಲೈ 2018, 6:55 IST
ಅಕ್ಷರ ಗಾತ್ರ

ನವದೆಹಲಿ:ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಶುಕ್ರವಾರ ಮೊದಲ ಅವಿಶ್ವಾಸ ಮತವನ್ನು ಎದುರಿಸಲಿದ್ದು, ಬೆಳಿಗ್ಗೆ 11ಕ್ಕೆ ಕಲಾಪ ಆರಂಭವಾಯಿತು. ಅವಿಶ್ವಾಸ ಮತದ ಮೇಲಿನ ಚರ್ಚೆ ನಡೆಯುತ್ತಿದೆ.

ಸಂಸದ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು,ಸಮಯ ಹಂಚಿಕೆ ಕುರಿತು ಆಕ್ಷೇಪಿಸಿದರು.

ಎನ್‌ಡಿಎ, ಯುಪಿಎ ಸೇರಿದಂತೆ ಯಾವ ಪಕ್ಷದ ಮೇಲೂ ನಮಗೆ ವಿಶ್ವಾಸವಿಲ್ಲ ಎಂದು ಹೇಳಿದ ಬಿಜು ಜನತಾ ದಳದ(ಬಿಜೆಡಿ)19 ಸದಸ್ಯರು ಸದನದಿಂದ ಹೊರ ನಡೆದರು. ಇದರಿಂದ ಮ್ಯಾಜಿಕ್‌ ಸಂಖ್ಯೆ 258ಕ್ಕೆ ಕುಸಿದಿದೆ.

ಪ್ರತಿಪಕ್ಷಗಳಿಗೆ ಕಡಿಮೆ ಸಮಯ ನೀಡಿರುವುದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಆಕ್ಷೇಪಿಸಿ, ಈ ಹಿಂದೆ ಎರಡು ದಿನ ಅಥವಾ ಮೂರು ದಿನ ಅವಕಾಶ ನೀಡಲಾಗುತ್ತಿತ್ತು. ಈಗ ಸಮಯ ಕಡಿಮೆಗೊಳಿಸಿದ್ದೀರಿ ಎಂದು ಸ್ಪೀಕರ್‌ ಅವರನ್ನು ಪ್ರಶ್ನಿಸಿದರು.

‘ಧರ್ಮಯುದ್ಧ’

ಟಿಡಿಪಿ ಅವಿಶ್ವಾಸ ನಿರ್ಣಯ ಮಂಡಿಸುತ್ತಿದೆ. ಇದು ಬಿಜೆಪಿ ಮತ್ತು ಟಿಡಿಪಿ ನಡುವಿನ ಹೋರಾಟವಲ್ಲ. ಆಂಧ್ರದ ಜನರು ಮತ್ತು ಕೇಂದ್ರ ನಡುವಿನ‘ಧರ್ಮಯುದ್ಧ’ ಎಂದು ಅವಿಶ್ವಾಸ ಮಂಡಿಸಿದಟಿಡಿಪಿ ಸದಸ್ಯ ಜಯದೇವ್‌ ಗಲ್ಲಾಹೇಳಿದರು. ಆಂಧ್ರದ 5 ಕೋಟಿ ಜನರಿಗೆ ಅನ್ಯಾಯವಾಗಿದೆ. ಕೊಟ್ಟಿದ್ದ ಭರವಸೆಯಲ್ಲಿ ಈಡೇರಿಸಿಲ್ಲ ಎಂದು ಪ್ರತಿಪಾದಿಸಿದರು.

ಬಿಎಜೆಪಿಯಿಂದಭ್ರಷ್ಟಚಾರಿಗಳ ರಕ್ಷಣೆ

ಪ್ರಧಾನಿ ಅವರು ಸೀಮಾಂಧ್ರವನ್ನು ‘ಸ್ಕ್ಯಾಮ್‌ ಆಂಧ್ರ’ ಎಂದು ಟೀಕಿಸಿದ್ದರು. ಆದರೆ,ಬಿಜೆಪಿ ಭ್ರಷ್ಟಾಚಾರಿಗಳನ್ನು ರಕ್ಷಿಸುತ್ತಿದೆ.ಕರ್ನಾಟಕದಲ್ಲಿ ಹಲವು ದೂರುಗಳಿರುವಜನಾರ್ಧನ ರೆಡ್ಡಿ ಅವರನ್ನು ರಕ್ಷಿಸುತ್ತಿದ್ದೀರಿ ಎಂದ ಜಯದೇವ ಗಲ್ಲಾ ಅವರು ‘ಭರತ್‌ ಆನೇ ನೇನು‘ ಚಲನಚಿತ್ರವನ್ನು ಪ್ರಸ್ತಾಪಿಸಿ,ಸರ್ಕಾರ ಕೆಲವರ ಹಿತಕ್ಕಾಗಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಎಂದು ನೀಡಿದ ಹೇಳಿಕೆಗೆ ಆಡಳಿತಾರೂಡ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

2016ರಲ್ಲಿ ಆಂಧ್ರಕ್ಕೆ ವಿಶೇಷ ಪ್ಯಾಕೇಜ್‌ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ನಾವಿನ್ನೂ ಭರವಸೆ ಈಡೇರಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ.ನಾವು ಕೇಂದ್ರ ಸರ್ಕಾರ, ಪ್ರಧಾನಿಗೆ‘ಬೆದರಿಕೆ’ ಹಾಕುತ್ತಿಲ್ಲ. ‘ಶಾಪ’ ನೀಡುತ್ತಿದ್ದೇವೆ. ಇದು ಪ್ರಜಾಪ್ರಭುತ್ವ ಮತ್ತು ಸರ್ಕಾರದ ನಡುವಿನ ಹೋರಾಟ ಎಂದು ಹೇಳಿದರು.

ಸರ್ಧಾರ್‌ ವಲ್ಲಬಾಭಾಯಿ ಪಟೇಲ್‌ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ನೂರಾರು ಕೋಟಿ ಅನುದಾನ ನೀಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಆದರೆ, ಆಂದ್ರದ ರಾಜಧಾನಿಗೆ ಯಾವ ಯೋಜನೆಯನ್ನೂ ನೀಡುತ್ತಿಲ್ಲ ಎಂದು ದೂರಿದರು.

ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ನೀಡಿದ್ದ ಸಮಯ ಮೀರಿ ಜಯದೇವ್‌ ಗಲ್ಲಾ ಅವರು ನಿರ್ಣಯ ಮಂಡನೆಯನ್ನು ಮುಂದುವರಿಸಿದ್ದರಿಂದ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಆಗ, ಮಂಡನೆ ಮುಗಿಸುವಂತೆ ಸ್ಪೀಕರ್‌ಸೂಚಸಿದರು.

ಟಿಡಿಪಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನೀಡಿರುವ ಹೇಳಿಕೆಗಳನ್ನು ಹಿಂಪಡೆಯಬೇಕು ಎಂದು ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್‌ ಆಗ್ರಹಿಸಿದರು.

ಬಿಜೆಪಿ ಪ್ರತಿಕ್ರಿಯೆ; ಕುಮಾರಸ್ವಾಮಿ ಕಣ್ಣೀರು ಪ್ರಸ್ತಾಪ

ಟಿಡಿಪಿ ಅವಿಶ್ವಾಸ ನಿರ್ಣಯ ಮಂಡಿಸಿದ ಬಳಿಕ, ಬಿಜೆಪಿ ರಾಕೇಶ್‌ ಸಿಂಗ್‌ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದ ಅರ್ಥ ನಮ್ಮ ಸರ್ಕಾರದ್ದಲ್ಲ ಎಂದರು. ಮಾತು ಮುಂದುವರಿಸಿದ ಅವರು, ‘ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದ್ದಾರೆ’ ಎಂದು ಪ್ರಸ್ತಾಪಿಸಿದರು. ಕರ್ನಾಟಕ ಸಿಎಂ ಕಣ್ಣೀರು ಹಾಕಿದ್ದನ್ನು ಇಡೀ ದೇಶವೇ ನೋಡಿದೆ ಎಂದು ಕುಟುಕಿದರು.

ಬೆಳಿಗ್ಗೆ ಸಭೆ ನಡೆಸಿದ ಶಿವಸೇನೆ ಸದಸ್ಯರು ಕಲಾಪಕ್ಕೆ ಹಾಜರಾಗಿಲ್ಲ.

ಸದನದಲ್ಲಿ ಸ್ಪೀಕರ್‌ ಸುಮಿತ್ರಾ ಮಹಾಜನ್‌
ಸದನದಲ್ಲಿ ಸ್ಪೀಕರ್‌ ಸುಮಿತ್ರಾ ಮಹಾಜನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT