ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘48 ವರ್ಷ ಕಾಂಗ್ರೆಸ್‌ನಿಂದ ಹಗರಣಗಳ ರಾಜಕೀಯ’

Last Updated 20 ಜುಲೈ 2018, 7:48 IST
ಅಕ್ಷರ ಗಾತ್ರ

ನವದೆಹಲಿ:ಕಾಂಗ್ರೆಸ್‌ 48 ವರ್ಷಗಳ ಕಾಲ ಹಗರಣಗಳ ರಾಜಕೀಯ ಮಾಡಿದೆ. ನಮ್ಮ ಸರ್ಕಾರ ಅಭಿವೃದ್ಧಿಪರ ಕಾರ್ಯಗಳನ್ನು ಕೈಗೊಂಡಿದೆ ಎಂದು ಬಿಜೆಪಿ ಸಂಸದ ರಾಕೇಶ್‌ ಸಿಂಗ್‌ ಅವರು ಸಂಸತ್‌ ಅಧಿವೇಶನದಲ್ಲಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

ಸಂಸತ್‌ನಲ್ಲಿ ಅವಿಶ್ವಾಸ ಮತದ ಮೇಲೆ ನಡೆಯುತ್ತಿರುವ ಚರ್ಚೆಯಲ್ಲಿ ಟಿಡಿಪಿ ಅವಿಶ್ವಾಸ ನಿರ್ಣಯ ಮಂಡಿಸಿದ ಬಳಿಕ, ರಾಕೇಶ್‌ ಸಿಂಗ್‌ ಪ್ರತಿಕ್ರಿಯಿಸಿ ಮಾತನಾಡಿ, ನಾವು ದೇಶದ ಎಲ್ಲಾ ರಾಜ್ಯಗಳನ್ನು ಒಂದೇ ದೃಷ್ಟಿಯಿಂದ ನೋಡುತ್ತಿದ್ದೇವೆ. 48 ವರ್ಷ ಕಾಂಗ್ರೆಸ್‌ನಿಂದ ಹಗರಣಗಳ ರಾಜಕೀಯ ನಡೆಸಿದೆ ಎಂದು ಆಪಾದಿಸಿದರು.

70ವರ್ಷದಲ್ಲಿ ಕಾಂಗ್ರೆಸ್‌ ಮಾಡದ್ದನ್ನು ಬಿಜೆಪಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರ 18 ಸಾವಿರ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದೆ. 4 ವರ್ಷದಲ್ಲಿ 4 ಲಕ್ಷ ಕುಟುಂಬಗಳಿಗೆ ವಿದ್ಯುತ್‌ ಒದಗಿಸಿದ್ದೇವೆ. ಬಡವರ ₹5 ಲಕ್ಷ ವರೆಗಿನ ಚಿಕಿತ್ಸಾ ವೆಚ್ಚ ಭರಿಸುತ್ತಿದ್ದೇವೆ ಇದೆಲ್ಲಾ ಸರ್ಕಾರ ಜನ ಪರ ಮಾಡಿದ ಕಾರ್ಯಗಳಲ್ಲೇ ಎಂದು ವಿಕ್ಷಗಳನ್ನು ಛೇಡಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ವೃದ್ಧಿಯಾಗುತ್ತಿದೆ ಎಂದು ಸರ್ಕಾರದ ಕಾರ್ಯಕ್ರಮಗಳ ಪಟ್ಟಿ ನೀಡಿದ ರಾಕೇಶ್‌ ಸಿಂಗ್‌, ನಾವು ಅವಿಶ್ವಾಸ ನಿರ್ಣಯವನ್ನು ವಿರೋಧಿಸುತ್ತೇವೆ ಎಂದು ಮಾತು ಮುಗಿಸಿದರು.
ಬಿಜೆಪಿಯ ಪ್ರತಿಕ್ರಿಯೆಗೆ ಕಾಂಗ್ರೆಸ್‌ ಮಧ್ಯೆ ಮಧ್ಯೆ ಆಕ್ಷೇಪ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT