ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರದಲ್ಲಿ ದೇಗುಲಗಳನ್ನು ತೆರೆದಿಲ್ಲವೇಕೆ: ಅಣ್ಣ ಹಜಾರೆ ಪ್ರಶ್ನೆ

ಜನರು ಕೈಗೊಳ್ಳುವ ಹೋರಾಟಕ್ಕೆ ಬೆಂಬಲ: ಭರವಸೆ
Last Updated 29 ಆಗಸ್ಟ್ 2021, 10:37 IST
ಅಕ್ಷರ ಗಾತ್ರ

ಪುಣೆ: ಮಹಾರಾಷ್ಟ್ರದಲ್ಲಿ ದೇವಸ್ಥಾನಗಳನ್ನು ತೆರೆಯದಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿರುವ ಸಾಮಾಜಿಕ ಹೋರಾಟಗಾರ ಅಣ್ಣ ಹಜಾರೆ ಅವರು, ದೇವಸ್ಥಾನಗಳ ಮೇಲಿನ ನಿರ್ಬಂಧಗಳ ತೆರವಿಗೆ ಆಗ್ರಹಿಸಿ ನಡೆಯುವ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಮದ್ಯದ ಅಂಗಡಿಗಳ ಮುಂದೆ ಉದ್ದನೆಯ ಸಾಲುಗಳಿರುವುದನ್ನು ಪ್ರಸ್ತಾಪಿಸಿರುವ ಅವರು, ದೇವಸ್ಥಾನಗಳನ್ನು ತೆರೆಯಲು ಮಹಾ ವಿಕಾಸ್ ಆಘಾಡಿ (ಎಂವಿಎ) ಸರ್ಕಾರ ನಿರಾಕರಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಅಹ್ಮದ್‌ನಗರ ಜಿಲ್ಲೆಯ ರಾಳೇಗಣ ಸಿದ್ಧಿ ಗ್ರಾಮದಲ್ಲಿ ಮಾತನಾಡಿದ ಅವರು, ‘ದೇವಸ್ಥಾನಗಳನ್ನು ತೆರೆಯಬೇಕು ಎಂದು ಆಗ್ರಹಿಸುತ್ತಿರುವ ಕೆಲವರು ನನ್ನನ್ನು ಭೇಟಿ ಮಾಡಿದರು. ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಅವರು ನಡೆಸುವ ಹೋರಾಟಕ್ಕೆ ಬೆಂಬಲಿಸುವುದಾಗಿ ತಿಳಿಸಿದೆ’ ಎಂದರು.

‘ದೇಗುಲಗಳನ್ನು ತೆರೆಯುವುದರಿಂದ ಯಾವ ಅಪಾಯವಿದೆ’ ಎಂದು ಪ್ರಶ್ನಿಸಿದ ಅವರು, ‘ಕೋವಿಡ್‌–19 ಪ್ರಸರಣವೇ ಇಂಥ ನಿಲುವಿಗೆ ಕಾರಣವಾಗಿದ್ದಲ್ಲಿ, ಮದ್ಯದ ಅಂಗಡಿಗಳ ಮುಂದಿರುವ ಜನರ ಸಾಲುಗಳನ್ನು ನೋಡಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT