ಮುಂಬೈ: ರತ್ನಗಿರಿ ಜಿಲ್ಲೆಯ ಗುಹಾಗರ್ ತಾಲ್ಲೂಕಿನಿಂದ ಮರಾಠವಾಡದ ಹಿಂಗೋಲಿ ಜಿಲ್ಲೆಯಲ್ಲಿರುವ ತಮ್ಮ ಊರಿಗೆ ಹೋಗುತ್ತಿದ್ದ ಕುಟುಂಬವೊಂದು ಮೂರು ದಿನಗಳಿಂದ ನಾಪತ್ತೆಯಾಗಿರುವ ಪ್ರಕರಣ ವರದಿಯಾಗಿದೆ.

ನಾಪತ್ತೆಯಾಗಿರುವ ಕುಟುಂಬಸ್ಥರು ಹಿಂಗೋಲಿಯ ಖಿಲ್ಲಾರ್ ಗ್ರಾಮದವರು. ಅವರನ್ನು ದ್ಯಾನೇಶ್ವರ್ ಚವಾಣ್, ಅವರ ಪತ್ನಿ ಸ್ಮಿತಾ, ಪುತ್ರರಾದ ಪಿಯೂಷ್, ಶೌರ್ಯ ಎಂದು ಗುರುತಿಸಲಾಗಿದೆ. ಅವರೆಲ್ಲ, ತಮ್ಮ ಊರಿನಲ್ಲಿ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗುಹಾಗರ್ನಿಂದ ಮಂಗಳವಾರ (ಆಗಸ್ಟ್ 26ರಂದು) ಕಾರಿನಲ್ಲಿ ಹೊರಟಿದ್ದರು.

ಕುಟುಂಬವು ಕೊನೆಯ ಬಾರಿಗೆ ಸಂಪರ್ಕಕ್ಕೆ ಬಂದಿದ್ದು, ಮಂಗಳವಾರ ಸಂಜೆ 5ರ ಹೊತ್ತಿಗೆ. ಆಗ ರತ್ನಗಿರಿ ಜಿಲ್ಲೆಯ ಚಿಪ್ಲುನ್ ಪ್ರದೇಶದಲ್ಲಿತ್ತು. ಅದಾದ ಬಳಿಕ ಅವರ ಫೋನ್ಗಳೂ ಸಂಪರ್ಕಕ್ಕೆ ಸಿಕ್ಕಿಲ್ಲ.

ಈ ಸಂಬಂಧ ಎರಡೂ ಜಿಲ್ಲೆಗಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಚವಾಣ್ ದಂಪತಿ ಗುಹಾಗರ್ನ ಪೊಮೆಂಡಿಯಲ್ಲಿ ಜಿಲ್ಲಾ ಪರಿಷದ್ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.

ಕರಾವಳಿಯ ಕೊಂಕಣ ಪ್ರದೇಶದ ರತ್ನಗಿರಿಯಿಂದ ಹಿಂಗೋಲಿ ಜಿಲ್ಲೆ ಸುಮಾರು 750 ಕಿ.ಮೀ. ದೂದರಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.