ಲಾಹೋರ್: ‘ಭಾರತದ ವಿರುದ್ಧ ಸಂಪೂರ್ಣ ಮಿಲಿಟರಿ ಕಾರ್ಯಾಚರಣೆಯನ್ನು ಆಡಳಿತಾರೂಢ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಮೇಲ್ವಿಚಾರಣೆಯಲ್ಲಿ ರೂಪಿಸಲಾಗಿದೆ’ ಎಂದು ಪಕ್ಷದ ಹಿರಿಯ ನಾಯಕಿಯೊಬ್ಬರು ಬುಧವಾರ ಹೇಳಿದ್ದಾರೆ.

‘ನವಾಜ್ ಅವರು ಎ, ಬಿ, ಸಿ, ಡಿ ರೀತಿಯ ನಾಯಕರಲ್ಲ. ಬದಲಿಗೆ ಅವರ ಕೆಲಸವೇ ಸ್ವತಃ ಮಾತನಾಡುತ್ತಿದೆ. ನವಾಜ್ ಷರೀಫ್ ಅವರು ಪಾಕಿಸ್ತಾನವನ್ನು ಪರಮಾಣು ಶಕ್ತಿ ರಾಷ್ಟ್ರವಾಗಿ ಮಾಡಿದರು. ಈಗ ಭಾರತದ ವಿರುದ್ಧ ಇಡೀ ಕಾರ್ಯಾಚರಣೆಯನ್ನು ಅವರೇ ರೂಪಿಸಿದರು’ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಾಹಿತಿ ಸಚಿವೆ ಅಜ್ಮಾ ಬುಖಾರಿ ಹೇಳಿದ್ದಾರೆ.

ಉಭಯ ದೇಶಗಳು ಕದನ ವಿರಾಮ ಒಪ್ಪಂದ ಮಾಡಿಕೊಂಡ ನಂತರ ಪ್ರಧಾನಿ ಶೆಹಬಾಜ್ ಷರೀಫ್ ಅವರ ಹಿರಿಯ ಸಹೋದರರೂ ಆಗಿರುವ ನವಾಜ್ ಅವರು ಪಾಕಿಸ್ತಾನದ ಜನತೆ ಮತ್ತು ಮಿಲಿಟರಿ ನಾಯಕತ್ವಕ್ಕೆ ಅಭಿನಂದನೆ ಸಲ್ಲಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.

‘ಪಾಕಿಸ್ತಾನವು ಶಾಂತಿಪ್ರಿಯ ದೇಶವಾಗಿದೆ ಮತ್ತು ಶಾಂತಿಗೆ ಆದ್ಯತೆ ನೀಡುತ್ತದೆ. ಆದರೆ ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬೇಕೆಂಬುದು ಸಹ ದೇಶಕ್ಕೆ ಗೊತ್ತಿದೆ’ ಎಂದು ಪೋಸ್ಟ್ನಲ್ಲಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.