ನವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಮೈಕೊರೆವ ಚಳಿ ಮುಂದುವರೆದಿದೆ. ಬುಧವಾರ ಈ ಋತುಮಾನದ ಅತ್ಯಂತ ಕನಿಷ್ಠ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಗುರುವಾರ ತಾಪಮಾನ ಮತ್ತಷ್ಟು ಕುಸಿಯಲಿದೆ ಎಂದು ಹೇಳಿದೆ.

ನಗರದ ಅಧಿಕೃತ ತಾಪಮಾನ ಪರಿಗಣನೆ ಕೇಂದ್ರ ಎಂದು ಪರಿಗಣಿಸಲಾಗುವ ಸಫ್ದಾರ್ ಜಂಗ್ ವೀಕ್ಷಣಾಲಯದಲ್ಲಿ ಬುಧವಾರ 3.5 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದ್ದು, ಇದು ಈ ಋತುಮಾನದ ಸಾಮಾನ್ಯ ತಾಪಮಾನಕ್ಕಿಂತ 3 ಡಿಗ್ರಿ ಕುಸಿದಿದೆ. ಇನ್ನೂ ಗರಿಷ್ಠ ತಾಪಮಾನವು 16.4ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಋತುಮಾನದ ಸಾಮಾನ್ಯ ತಾಪಮಾನಕ್ಕಿಂತ 4 ಡಿಗ್ರಿ ಕುಸಿದಿದೆ.

ಪಾಲಂ ವೀಕ್ಷಣಾಲಯದಲ್ಲಿ ಕನಿಷ್ಠ ತಾಪಮಾನ 5.2 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 15.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಇಂದು ಮತ್ತಷ್ಟು ಕುಸಿತ:“ಗುರುವಾರ ಗರಿಷ್ಠ ತಾಪಮಾನ 3 ಡಿಗ್ರಿಗಿಂತ ಮತ್ತಷ್ಟು ಕುಸಿಯಲಿದ್ದು, ಶುಕ್ರವಾರ ಏರಿಕೆ ಕಂಡುಬರಲಿದೆ,” ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ತಿಳಿಸಿದ್ದಾರೆ.

ಹೊಸ ವರ್ಷದ ದಿನ ದೆಹಲಿ ತಾಪಮಾನ 5 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಕಾಣಲಿದ್ದು, ಜನವರಿ 2 ಮ3 ರಂದು ಸರಿ ಸುಮಾರು 7 ಡಿಗ್ರಿ ಸೆಲ್ಸಿಯಸ್‌ಗೆ ಕನಿಷ್ಠ ತಾಪಮಾನ ಹೆಚ್ಚಾಗಲಿದೆ ಎಂದು ಅವರು ತಿಳಿಸಿದ್ದಾರೆ.

“ಜನವರಿ 4ರಂದು ಪಶ್ಚಿಮ ಹಿಮಾಲಯಕ್ಕೆ ಪಶ್ಚಿಮ ಮಾರುತಗಳು ಬೀಸುವ ಸಾಧ್ಯತೆ ಇದ್ದು, ದೆಹಲಿಯಲ್ಲೂ ತುಂತುರು ಮಳೆ ಮತ್ತು ಕೆಲವೆಡೆ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆ ಇದೆ. ಇದರಿಂದಾಗಿ ತಾಪಮಾನದಲ್ಲೂ ಏರಿಕೆ ಆಗಲಿದೆ,” ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ, ದೆಹಲಿಯ ವಾಯುಗುಣಮಟ್ಟವೂ ಅತ್ಯಂತ ಹದಗೆಟ್ಟಿದ್ದು (AQI)290ಕ್ಕೆ ಕುಸಿದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ವಾಯುಗುಣಮಟ್ಟದ ಕನಿಷ್ಠ ಸರಾಸರಿ ಪ್ರಮಾಣ 265 ರಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.