ಬುಧವಾರ, 18 ಫೆಬ್ರುವರಿ 2026
×
ADVERTISEMENT
ಕೇರಳ ಹಿಂದಿಕ್ಕಿ ಸಂಪೂರ್ಣ ಸಾಕ್ಷರತೆ ಸಾಧಿಸಿದ ಮೀಜೊರಾಂ ಸಾಧನೆಯ ಹಾದಿ ಹೀಗಿತ್ತು..
ಕೇರಳ ಹಿಂದಿಕ್ಕಿ ಸಂಪೂರ್ಣ ಸಾಕ್ಷರತೆ ಸಾಧಿಸಿದ ಮೀಜೊರಾಂ ಸಾಧನೆಯ ಹಾದಿ ಹೀಗಿತ್ತು..
ಫಾಲೋ ಮಾಡಿ
Published 18 ಫೆಬ್ರುವರಿ 2026, 13:25 IST
Last Updated 18 ಫೆಬ್ರುವರಿ 2026, 13:56 IST
Comments
ದೇಶದಲ್ಲಿ ಅತಿ ಸಾಕ್ಷರ ರಾಜ್ಯ ಯಾವುದು ಎಂದರೆ ‘ಕೇರಳ’ ಎಂಬ ಉತ್ತರ ಸಾಮಾನ್ಯವಾಗಿದ್ದ ಕಾಲವೊಂದಿತ್ತು. ಆದರೆ ಇದೀಗ ಸ್ಥಾನ ಈಶಾನ್ಯ ರಾಜ್ಯವಾದ ಮಿಜೋರಾಂ ಪಾಲಾಗಿದೆ. ದೇಶದ ಅತಿ ಹೆಚ್ಚು ಸಾಕ್ಷರರು ಇರುವ ರಾಜ್ಯದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಲು ಮಿಜೋರಾಂ ನಡೆಸಿದ ಸಾಧನೆ ಅಂತಿಂಥದ್ದಲ್ಲ. ಈ ಪುಟ್ಟ ರಾಜ್ಯ ಮಾಡಿದ ಕಸರತ್ತಾದರೂ ಏನು..? ಇಲ್ಲಿದೆ ಮಾಹಿತಿ.
ಕಂಠಪಾಠ ಅಲ್ಲ.. ಅನುಭವ ಆಧಾರಿತ ಪಠ್ಯಕ್ರಮ
ಇಲ್ಲಿನ ಶಾಲೆಗಳಲ್ಲಿ ಅನುಭವ ಆಧಾರಿತ ಪಠ್ಯಕ್ರಮವನ್ನು ಪರಿಚಯಿಸಲು ಯೋಜನೆ ರೂಪಿಸಲಾಗಿದೆ. 770 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್‌ ಪರೀಕ್ಷೆ ನಡೆಸಲಾಗುವುದು. 2026-27ನೇ ಶೈಕ್ಷಣಿಕ ವರ್ಷದಿಂದ 1, 2, 3 ಮತ್ತು 6ನೇ ತರಗತಿಗಳಿಗೆ ಹೊಸ ಪಠ್ಯಕ್ರಮ ಜಾರಿಯಾಗಲಿದೆ. ಗಣಿತ ಹಾಗೂ ವಿಜ್ಞಾನ ವಿಷಯಗಳ ಪಠ್ಯಕ್ರಮವನ್ನು ಮಕ್ಕಳ ದೈನಂದಿನ ಜೀವನಕ್ಕೆ ಅನ್ವಯವಾಗುವಂತೆ ರೂಪಿಸಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಜನೆಗಳಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಠ್ಯಕ್ರಮದಲ್ಲಿ ಡಿಜಿಟಲ್ ಸಾಕ್ಷರತೆ ಅನಿವಾರ್ಯ
ಇತ್ತೀಚಿಗೆ ಭುವನೇಶ್ವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟಪತಿ ದ್ರೌಪದಿ ಮುರ್ಮು ಅವರು ‘ಡಿಜಿಟಲ್ ಪರಿಕರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಶಾಲಾ ಪಠ್ಯಕ್ರಮದಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಸೇರಿಸುವುದು ಅನಿವಾರ್ಯವಾಗಿದೆ‘ ಎಂದು ಉಲ್ಲೇಖಿಸಿದ್ದಾರೆ. ಸೈಬರ್ ಭದ್ರತೆ,  ಬೆದರಿಕೆಗಳು, ಡೀಪ್‌ಫೇಕ್‌, ತಪ್ಪು ಮಾಹಿತಿ ಹಾಗೂ ಆನ್‌ಲೈನ್ ವಂಚನೆ ಕುರಿತ ಡಿಜಿಟಲ್‌ ಸಾಕ್ಷರತೆಯನ್ನು ಶಾಲಾ ಹಂತದಿಂದಲೇ ಕಲಿಸುವುದು ಅನಿವಾರ್ಯವಾಗಿದೆ. ಸಮೀಕ್ಷೆಯ ಪ್ರಕಾರ, ಶೇ 32ರಷ್ಟು ಪೋಷಕರು ಅಂತರ್ಜಾಲದ ಸುರಕ್ಷತೆ ಕುರಿತು ಮೀಸಲಾದ ವಿಷಯ ಜಾರಿಯಾಗಬೇಕು ಎಂದು ಹೇಳಿದ್ದಾರೆ.
ಉಲ್ಲಾಸ್–ನವ ಭಾರತ ಸಾಕ್ಷರತಾ ಕಾರ್ಯಕ್ರಮ
ಉಲ್ಲಾಸ್–ನವ ಭಾರತ ಸಾಕ್ಷರತಾ ಕಾರ್ಯಕ್ರಮದ ಅಡಿ 3 ಕೋಟಿಗೂ ಹೆಚ್ಚು ಕಲಿಯುವವರಿದ್ದಾರೆ. 42 ಲಕ್ಷ ಕಲಿಸಲು ಸ್ವಯಂ ಸೇವಕರು ದಾಖಲಾಗಿದ್ದಾರೆ.  ಈಗಾಗಲೇ ಸುಮಾರು 1.83 ಕೋಟಿ ಜನರು ಈ ಯೋಜನೆಯಿಂದ ಸಾಕ್ಷರರಾಗಿದ್ದಾರೆ. ಈ ಕಾರ್ಯಕ್ರಮ 26 ಭಾರತೀಯ ಭಾಷೆಗಳಲ್ಲಿ ಕಲಿಕಾ ಸಾಮಗ್ರಿಗಳನ್ನು ನೀಡುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT