ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹53 ಕೋಟಿ ಮೌಲ್ಯದ ಹೈಡ್ರೊಫೋನಿಕ್ ಗಾಂಜಾ, ಚಿನ್ನ ಮತ್ತು ವಜ್ರವನ್ನು ಜಪ್ತಿ ಮಾಡಿ 20 ಜನರನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ನವೆಂಬರ್ 13ರಿಂದ 20ರವರೆಗೆ ನಡೆದ ಕಾರ್ಯಾಚರಣೆಯಲ್ಲಿ ಈ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೊದಲ ಹಂತದ ಕಾರ್ಯಾಚರಣೆಯಲ್ಲಿ, ಪ್ರತ್ಯೇಕ ಪ್ರಕರಣಗಳಲ್ಲಿ ₹25.318 ಕೋಟಿ ಮೌಲ್ಯದ 25.318 ಕೆ.ಜಿ ಹೈಡ್ರೊಫೋನಿಕ್ ಗಾಂಜಾವನ್ನು ವಶಪಡಿಸಿಕೊಂಡು, ಹಲವು ಪ್ರಯಾಣಿಕರನ್ನು ಬಂಧಿಸಲಾಗಿತ್ತು. ಮತ್ತೊಂದು ಕಾರ್ಯಾಚರಣೆಯಲ್ಲಿ ₹26.981 ಕೋಟಿ ಮೌಲ್ಯದ 26.981 ಕೆ.ಜಿ ಹೈಡ್ರೊಫೋನಿಕ್ ಗಾಂಜಾವನ್ನು ವಶಪಡಿಸಿಕೊಂಡು 8 ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅಕ್ರಮ ಚಿನ್ನ ಸಾಗಾಣೆಯ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು, ನಾಲ್ಕು ಪ್ರಯಾಣಿಕರಿಂದ ₹65.57 ಲಕ್ಷ ಮೌಲ್ಯದ 551 ಗ್ರಾಂ ಚಿನ್ನ ವಶಪಡಿಕೊಳ್ಳಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ₹54.13 ಲಕ್ಷ ಮೌಲ್ಯದ 469.75 ಕ್ಯಾರಟ್ ವಜ್ರ ಜಪ್ತಿ ಮಾಡಲಾಗಿದೆ. ಆರೋಪಿಯು ಅವುಗಳನ್ನು ದೇಹದೊಳಗೆ ಇಟ್ಟುಕೊಂಡಿದ್ದರು.
.₹7.7 ಕೋಟಿ ಮೊತ್ತದ ಡ್ರಗ್ಸ್ ಜಪ್ತಿ: ವಿದೇಶಿ ಪ್ರಜೆಗಳೂ ಸೇರಿ 19 ಮಂದಿ ಸೆರೆ.Bengaluru Heist | ‘ಹಗಲು’ ದರೋಡೆ: ಮೂವರ ವಶ, ತಿರುಪತಿಯಲ್ಲಿ ಇನೊವಾ ಕಾರು ಪತ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.