ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಪಮಾನ ತಪ್ಪಾಗಿ ದಾಖಲು: ಸೆನ್ಸರ್‌ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದ ಐಎಂಡಿ

Published 1 ಜೂನ್ 2024, 13:36 IST
Last Updated 1 ಜೂನ್ 2024, 13:36 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಮಂಗೇಶ್‌ಪುರದ ಸ್ವಯಂಚಾಲಿತ ಹವಾಮಾನ ಕೇಂದ್ರದಲ್ಲಿ (ಎಡಬ್ಲ್ಯುಎಸ್‌) ಮೇ 29ರಂದು 52.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಸೆನ್ಸರ್‌ಗಳು ಸಮರ್ಪಕವಾಗಿ ಕೆಲಸ ಮಾಡದ ಕಾರಣ ತಪ್ಪಾಗಿ ಹವಾಮಾನ ವರದಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಮೇ 29ರಂದು ದೆಹಲಿಯಲ್ಲಿ 45.2ರಿಂದ 49.1 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಆದರೆ ಎಡಬ್ಲ್ಯುಎಸ್‌ ಮೂರು ಡಿಗ್ರಿ ಸೆಲ್ಸಿಯಸ್‌ ಹೆಚ್ಚು ತೋರಿಸಿತ್ತು. ಈ ಹಿನ್ನೆಲೆಯಲ್ಲಿ ಎಡಬ್ಲ್ಯುಎಸ್‌ನಲ್ಲಿರುವ ಸಾಧನಗಳನ್ನು ಪರಿಶೀಲಿಸಲು ಮಂಗೇಶ್‌ಪುರಕ್ಕೆ ತಜ್ಞರ ತಂಡವನ್ನು ಕಳಿಸಲಾಗಿದೆ. ಪರಿಶೀಲನೆ ನಡೆಸಿ ದುರಸ್ತಿ ಮಾಡಲಾಗುವುದು ಎಂದು ಐಎಂಡಿ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಅವರು ತಿಳಿಸಿದ್ದಾರೆ.

ಭೂವಿಜ್ಞಾನ ಸಚಿವ ಕಿರಣ್ ರಿಜಿಜು ಅವರು ಮಂಗೇಶ್‌ಪುರ ಘಟನೆ ಕುರಿತು ಕರಡು ವರದಿ ಹಂಚಿಕೊಂಡಿದ್ದಾರೆ. ಐಎಂಡಿ ಪುಣೆಯ ‘ಸರ್ಫೇಸ್‌ ಇನ್‌ಸ್ಟ್ರುಮೆಂಟ್‌ ವಿಭಾಗ’ದ ಸಾಧನಗಳನ್ನೂ ತಪಾಸಣೆಗೆ ಒಳಪಡಿಸಲಾಗುವುದು ಮತ್ತು ಎಡಬ್ಲ್ಯುಎಸ್‌ನಲ್ಲಿರುವ ಸೆನ್ಸರ್‌ಗಳನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ.

ಜನವರಿಯಿಂದ ಈಚೆಗೆ ದೇಶದಾದ್ಯಂತ 800 ಎಡಬ್ಯುಎಸ್‌ಗಳನ್ನು ಅಳವಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT