ನವದೆಹಲಿ: ಪೊಲೀಸ್ ಠಾಣೆ ಮೇಲೆ ಗ್ರನೇಡ್ ದಾಳಿ ನಡೆಸಿದ ಪ್ರಕರಣದಲ್ಲಿ ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಭಯೋತ್ಪಾದಕ ಸಂಘಟನೆಯ (ಬಿಕೆಐ) ಸಂಪರ್ಕ ಹೊಂದಿದೆ ಎನ್ನಲಾದ ಪಂಜಾಬ್ನ 15 ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

‘ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ಕಳೆದ ಡಿಸೆಂಬರ್ನಲ್ಲಿ ದಾಳಿ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಬತಾಲಾ, ಅಮೃತಸರ, ಕಪೂರ್ತಾಲಾ ಜಿಲ್ಲೆಗಳಲ್ಲಿ ಶೋಧ ಕಾರ್ಯ ನಡೆದಿದೆ. ದಾಳಿಯಲ್ಲಿ ಹಲವು ನಿಷೇಧಿತ ವಸ್ತುಗಳು, ಮೊಬೈಲ್ ಮತ್ತು ಇತರ ಡಿಜಿಟಲ್ ಉಪಕರಣ ಮತ್ತು ಕಾಗದ ಪತ್ರಗಳು ಲಭ್ಯವಾಗಿವೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ ಮೂಲದ ಬಿಕೆಐ ಸದಸ್ಯ ಮತ್ತು ಗ್ಯಾಂಗ್ಸ್ಟರ್ ಹರಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾನ್ ಮತ್ತು ಆತನ ಸಹಜಚರ ಶಂಷೇರ್ ಸಿಂಗ್ ಶೇರಾ ಅಲಿಯಾಸ್ ಹನಿ ಮತ್ತು ಇತರ ದೇಶಗಳಲ್ಲಿರಬಹುದಾದ ಸಂಘಟನೆಯ ಸದಸ್ಯರ ಮೇಲೆ ಎನ್ಐಎ ತೀವ್ರ ನಿಗಾ ವಹಿಸಿದೆ.

‘ಘನೀ ಕಾ ಬಂಗಾರ ಪೊಲೀಸ್ ಠಾಣೆ ಮೇಲೆ ನಡೆದ ಗ್ರನೇಡ್ ದಾಳಿಗೆ ಸಂಬಂಧಿಸಿದಂತೆ ಬಂಧಿತ ವ್ಯಕ್ತಿಯು ಕೃತ್ಯವನ್ನು ಒಪ್ಪಿಕೊಂಡಿದ್ದು, ಜತೆಗೆ ಹ್ಯಾಪಿ, ಶಂಷೇರ್ ಪಾತ್ರವನ್ನು ತಿಳಿಸಿದ್ದಾನೆ. ಪಾಕಿಸ್ತಾನ ಸಹಿತ ವಿದೇಶಗಳಿಂದ ಈ ತಂಡ ಕಾರ್ಯನಿರ್ವಹಿಸುತ್ತಿದ್ದು, ಭಾರತದಲ್ಲಿ ದಾಳಿಯ ಸಂಚು ರೂಪಿಸುತ್ತಿದೆ’ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.