ನವದೆಹಲಿ: ದೇಶದಲ್ಲಿ ಕೋವಿಡ್–19 ಲಸಿಕೆ ಡೋಸ್ಗಳನ್ನು ಬೆರೆಸುವುದನ್ನು ಸದ್ಯಕ್ಕೆ ಅನುಸರಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ. ಬೆರೆಸಿದ ಲಸಿಕೆಯ ಪರಿಣಾಮಕಾರಿ ಅಂಶಗಳ ಬಗ್ಗೆ ಸಾಕಷ್ಟು ವೈಜ್ಞಾನಿಕ ಆಧಾರಗಳು ಸಿಗುವವರೆಗೂ ಅದರ ಬಳಕೆ ಇರುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಪ್ರಸ್ತುತ ಕೋವಿಡ್ ಲಸಿಕೆ ಹಾಕಲು ಜಾರಿಯಲ್ಲಿರುವ ಕಾರ್ಯಾಚರಣೆಯ ವಿಧಾನಗಳಲ್ಲಿ ಬದಲಾವಣಿಗಳಿಲ್ಲ, ಲಸಿಕೆ ಹಾಕಿಸಿಕೊಳ್ಳಲು ಅರ್ಹರಾಗಿರುವ ಎಲ್ಲರಿಗೂ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ನ ಎರಡು ಡೋಸ್ಗಳು ಸಿಗಲಿವೆ ಎಂದು ತಿಳಿಸಿದೆ.

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಡೋಸ್ಗಳನ್ನು ಬೆರೆಸಿ ಪ್ರಯೋಗಿಸುವ ಸಾಧ್ಯತೆಗಳ ಬಗ್ಗೆ ಸರ್ಕಾರವು ಪರಿಗಣಿಸಬಹುದಾಗಿದೆ ಎಂದು ಕೆಲವು ಅಧಿಕಾರಿಗಳು ಹೇಳಿಕೆ ನೀಡಿದ್ದರು.

ಇದನ್ನೂ ಓದಿ– ರಷ್ಯಾದಿಂದ ಬಂದ 30 ಲಕ್ಷ ಡೋಸ್ ಸ್ಪುಟ್ನಿಕ್ ವಿ ಲಸಿಕೆಗಳು

ಲಸಿಕೆ ಬೆರಿಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಅದರಿಂದ ಸಕರಾತ್ಮಕ ಪರಿಣಾಮವಾಗುವುದು ಸಾಧ್ಯವಾಗಬಹುದು, ಅದರೊಂದಿಗೆ ಅಡ್ಡ ಪರಿಣಾಮಗಳನ್ನೂ ತಳ್ಳಿ ಹಾಕುವಂತಿಲ್ಲ, ಆ ಬಗ್ಗೆ ಸಂಶೋಧನೆಗಳಿಂದಲೇ ಉತ್ತರ ದೊರೆಯಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಭಿಪ್ರಾಯ ಪಟ್ಟಿದೆ.

ಲಸಿಕೆ ಕೊರತೆ ಇಲ್ಲ. ಜೂಲೈ ಮಧ್ಯ ಅಥವಾ ಆಗಸ್ಟ್ ವೇಳೆಗೆ ನಿತ್ಯ 1 ಕೋಟಿ ಜನರಿಗೆ ಲಸಿಕೆ ಹಾಕುವಷ್ಟು ಪೂರೈಕೆ ಇರಲಿದೆ. ದೇಶದಲ್ಲಿ ಎಲ್ಲ ಜನರಿಗೆ ಡಿಸೆಂಬರ್ ಹೊತ್ತಿಗೆ ಲಸಿಕೆ ಹಾಕುವ ಭರವಸೆ ಇರುವುದಾಗಿ ಐಸಿಎಂಆರ್ನ ಬಲರಾಮ್ ಭಾರ್ಗವ ಹೇಳಿದ್ದಾರೆ.

ಮಕ್ಕಳಲ್ಲಿ ಕೊರೊನಾ ವೈರಸ್ ಸೋಂಕಿನ ಕುರಿತು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಮಾತನಾಡಿದ್ದು, ಸೋಂಕು ತಗುಲಿದರೂ ಮಕ್ಕಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಅವರಲ್ಲಿ ಸೋಂಕು ಗಂಭೀರ ಸ್ವರೂಪಕ್ಕೆ ತಿರುಗಿಲ್ಲ. ಆದರೆ, ವೈರಸ್ ತನ್ನ ಸ್ವರೂಪವನ್ನು ಮಕ್ಕಳಲ್ಲಿ ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಅದರಿಂದಾಗಿ ಮಕ್ಕಳ ಮೇಲೆ ಕೋವಿಡ್–19 ಪರಿಣಾಮ ಹೆಚ್ಚುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.