ನವದೆಹಲಿ: ಇಂದಿನ ದಿನಮಾನದಲ್ಲಿ ಮೊಬೈಲ್, ಇಂಟರ್ನೆಟ್ ಬಳಸದೇ ಇರುವುದು ಕಷ್ಟಸಾಧ್ಯ. ಆದರೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಬಾಲ್ ಅವರು ಮೊಬೈಲ್ ಅಥವಾ ಇಂಟರ್ನೆಟ್ ಜಗತ್ತಿನಿಂದ ದೂರವಿದ್ದಾರೆ.

ವಿಕಸಿತ ಭಾರತ ಯುವ ಪ್ರತಿನಿಧಿಗಳ ಸಂವಾದದಲ್ಲಿ ಭಾಗವಹಿಸಿದ್ದ ಅಜಿತ್ ಅವರು ‘ನಾನು ಮೊಬೈಲ್, ಇಂಟರ್ನೆಟ್ ಬಳಸುವುದಿಲ್ಲ’ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಜಿತ್ ಅವರು, ‘ನಾನು ಫೋನ್ ಬಳಸುವುದಿಲ್ಲ ಎಂದು ನಿಮಗೆ ಹೇಗೆ ಗೊತ್ತಾಯಿತು ಎಂದು ನನಗೆ ತಿಳಿದಿಲ್ಲ. ಆದರೆ ಅದು ನಿಜ, ನಾನು ವೈಯಕ್ತಿಕ ಅಥವಾ ಕುಟುಂಬ ವಿಚಾರಗಳಿಗೆ ಹೊರತುಪಡಿಸಿ ಇಂಟರ್ನೆಟ್ ಅಥವಾ ಫೋನ್ಗಳನ್ನು ಬಳಸುವುದಿಲ್ಲ’ ಎಂದಿದ್ದಾರೆ.

ಸಂವಹನ ಹೇಗೆ ಮಾಡುತ್ತೀರಿ ಎನ್ನುವುದಕ್ಕೆ, ‘ಸಂವಹನಕ್ಕೆ ಹಲವಾರು ವಿಧಾನಗಳಿವೆ. ಸಾರ್ವಜನಿಕರಿಗೆ ತಿಳಿದಿಲ್ಲದ ಕೆಲವು ರಹಸ್ಯ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ’ ಎಂದು ಒತ್ತಿ ಹೇಳಿದ್ದಾರೆ.
.ಜಗತ್ತಿನ ಎಲ್ಲ ಸಂಘರ್ಷಗಳಿಗೆ ಕಾರಣ ತಿಳಿಸಿದ ದೋಬಾಲ್.
ಇದೇ ಕಾರ್ಯಕ್ರಮದಲ್ಲಿ ಜಗತ್ತಿನಲ್ಲಾಗುತ್ತಿರುವ ಸಂಘರ್ಷಗಳ ಬಗ್ಗೆ ಮಾತನಾಡಿ, ‘ಕೆಲವು ದೇಶಗಳು ತಮ್ಮ ಇಚ್ಛೆಯನ್ನು ಇತರ ರಾಷ್ಟ್ರಗಳ ಮೇಲೆ ಹೇರಲು ಪ್ರಯತ್ನಿಸುತ್ತಿವೆ. ಅದಕ್ಕಾಗಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತಿವೆ. ಜಗತ್ತಿನಾದ್ಯಂತ ನಡೆಯುತ್ತಿರುವ ಎಲ್ಲ ಸಂಘರ್ಷಗಳಿಗೂ ಇದೇ ಕಾರಣ’ ಎಂದು ಹೇಳಿದ್ದಾರೆ.

ಜಗತ್ತಿನಾದ್ಯಂತ ತಲೆದೋರುತ್ತಿರುವ ಎಲ್ಲ ಸಂಘರ್ಷಗಳಿಗೂ ಭದ್ರತಾ ಕಳವಳವೇ ಮೂಲ ಎಂದು ದೋಬಾಲ್ ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.