ಭುವನೇಶ್ವರ: ಒಡಿಶಾದಲ್ಲಿ ಈ ವರ್ಷ ಕಾಣೆಯಾಗಿದ್ದ 1,209 ಮಕ್ಕಳು ಹಾಗೂ 1,078 ಯುವತಿಯರು ಸೇರಿದಂತೆ 6,667 ಮಹಿಳೆಯರನ್ನು 'ಆಪರೇಷನ್ ಅನ್ವೇಷಣ್' ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದೇ ವರ್ಷ ಫೆಬ್ರುವರಿಯಲ್ಲಿ 139 ಮಕ್ಜಳು ಹಾಗೂ 593 ಮಹಿಳೆಯರು ಕಾಣೆಯಾಗಿದ್ದರು. ಏಪ್ರಿಲ್ನಲ್ಲಿ 421 ಮಕ್ಜಳು ಹಾಗೂ 3,073 ಮಹಿಳೆಯರು ಹಾಗೂ ಮೇ ತಿಂಗಳಿನಲ್ಲಿ 291 ಮಕ್ಜಳು ಹಾಗೂ 942 ಮಹಿಳೆಯರು ಕಾಣೆಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕಾಣೆಯಾದವರನ್ನು ಪತ್ತೆ ಹಚ್ಚುವುದಕ್ಕಾಗಿ ಆ.18 ರಿಂದ ಆ.22 ರ ವರೆಗೆ 'ಆಪರೇಷನ್ ಅನ್ವೇಷಣ್' ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ಕಾಣೆಯಾಗಿದ್ದ 358 ಮಕ್ಕಳು ಹಾಗೂ 2,049 ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಾರ್ಯಾಚರಣೆಯಲ್ಲಿ ಪುರಿ ಜಿಲ್ಲಾ ಪೊಲೀಸರು ಕಾಣೆಯಾಗಿದ್ದ 45 ಮಕ್ಕಳು ಹಾಗೂ 504 ಮಹಿಳೆಯರನ್ನು ರಕ್ಷಿಸಿದ್ದಾರೆ. ಭದ್ರಕ್ನ ಪೊಲೀಸರು 37 ಮಕ್ಕಳು ಹಾಗೂ 318 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಕಟಕ್ ಜಿಲ್ಲಾ ಪೊಲೀಸರು 21 ಮಕ್ಕಳು ಮತ್ತು 304 ಮಹಿಳೆಯರು ರಕ್ಷಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.