ನೇಹಾ ಭಂಡಾರಿ ತಂಡದ ಸಾಧನೆ ‘ಆಪ
ರೇಷನ್ ಸಿಂಧೂರ’ದ ವೇಳೆ ನೇಹಾ ಭಂಡಾರಿ ಅವರು ಆರು ಮಹಿಳಾ ಕಾನ್‌ಸ್ಟೆಬಲ್‌ಗಳ ತಂಡದ ಜೊತೆಗೆ ಸಾಂಬಾ, ಅಖ್ನೂರ್, ಆರ್.ಎಸ್.ಪುರದ ಅಂತರರಾಷ್ಟ್ರೀಯ ಗಡಿಯಲ್ಲಿ ಶತ್ರುಪಡೆಗಳ ನೆಲೆಗಳನ್ನು ಗುರಿಯಾಗಿರಿಸಿ ಕೊಂಡು ನಿಖರವಾದ ದಾಳಿ ನಡೆಸಿದ್ದರು. ಉತ್ತರಾಖಂಡ ಮೂಲದ ನೇಹಾ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೂರನೇ ತಲೆಮಾರಿನವರು. ನೇಹಾ ಅವರ ಅಜ್ಜ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ್ದು, ಪೋಷಕರು ಕೇಂದ್ರಿಯ ಮೀಸಲು ಪೊಲೀಸ್ ಪಡೆಯಲ್ಲಿ ಕೆಲಸ ಮಾಡಿದ್ದರು. ‘ಪಾಕಿಸ್ತಾನ ನೆಲೆಗಳ ಮೇಲೆ ದಾಳಿ ನಡೆಸಿ, ಪ್ರತ್ಯುತ್ತರ ನೀಡಿದ್ದು, ತಂಡಕ್ಕೆ ಹೆಮ್ಮೆಯ ವಿಚಾರವಾಗಿದೆ’ ಎಂದು ನೇಹಾ ತಿಳಿಸಿದ್ದಾರೆ.